

ಶಿರಸಿ: ಆಹಾರ ಹುಡುಕಿ ಮನೆ ಬಾಗಿಲಿಗೆ ಚಿರತೆ ಬಂದ ಘಟನೆ ತಾಲೂಕಿನ ಕುಪ್ಪಳಿಗೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಇಲ್ಲಿಯ ಮಹಾಬಲೇಶ್ವರ ಹೆಗಡೆ ಅವರ ಮನೆ ಮುಂದೆ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿಯಲ್ಲಿ ಚಿರತೆಯ ಚಲನವಲನಗಳು ದಾಖಲಾಗಿವೆ. ರಾತ್ರಿ 3.30ರ ವೇಳೆ ಈ ಚಿರತೆ ಬಂದಿದ್ದು, ಈ ವೇಳೆ ಪಂಜರದೊಳಗೆ ಇದ್ದ ನಾಯಿ ಬೊಗಳಲಾರಂಭಿಸಿದೆ. ಮನೆ ಮಂದಿ ವಿದ್ಯುತ್ ದೀಪ ಹಾಕಿದಾಗ ಚಿರತೆ ಪರಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಶಿರಸಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಚಿರತೆಗಳ ಸಂಚಾರ ಅಧಿಕವಾಗಿದೆ. ನಾಯಿ ಬೇಟೆಗೆ ಆಗಮಿಸುವ ಈ ಚಿರತೆಗಳು ಗ್ರಾಮೀಣ ಪ್ರದೇಶದ ಜನತೆಯನ್ನು ಭಯಕ್ಕೆ ದೂಡಿವೆ.