ವಿಶೇಷಾಧಿಕಾರಿ ಪ್ರಾಧಿಕಾರದಲ್ಲಿ ಕಾನೂನು ಸಲಹೆಗಾರರು, ಕಿರಿಯ ವಕೀಲರು ಸೇರಿ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Advocate
Published on

ಬೆಂಗಳೂರು: ಕಂದಾಯ ಇಲಾಖೆ ಅಧೀನದಲ್ಲಿರುವ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಕಾರ್ಯಾಲಯದಿಂದ ಐಎಂಎ ಮತ್ತು ಇತರ ವಂಚನೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಬೆಂಗಳೂರು ಕಚೇರಿಯಲ್ಲಿ ಕಾನೂನು ಸಲಹೆಗಾರರು, ಕಿರಿಯ ವಕೀಲರು ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಕಾನೂನು ಸಲಹೆಗಾರ, ಕಿರಿಯ ವಕೀ, ಮುಖ್ಯ ಆರ್ಥಿಕ ವಿಶ್ಲೇಷಕ (ಸನ್ನದು ಲೆಕ್ಕಿಗರು), ರಿಸರ್ಚ್​ ಆ್ಯಂಡ್​ ಅಕೌಂಟಿಂಗ್, ಅಕೌಂಟಿಂಗ್​ ಕ್ಲರ್ಕ್​.

ಕಾನೂನು ಸಲಹೆಗಾರರು, ಕಿರಿಯ ವಕೀಲರು: ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಕನಿಷ್ಠ 10 ವರ್ಷ ಹೈಕೋರ್ಟ್​ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು. 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಜಿಲ್ಲಾ ನ್ಯಾಯಾಧೀಶರಾಗಿ 1.1.2020ರ ನಂತರ ನಿವೃತ್ತಿ ಹೊಂದಿದವರಿಗೆ ಆದ್ಯತೆ ನೀಡಲಾಗಿದೆ. 30,000 ರೂ. ಮಾಸಿಕ ವೇತನದೊಂದಿಗೆ 2,500 ರೂ. ಕ್ಲರ್ಕೇಜ್​ ಭತ್ಯೆ ಇರಲಿದೆ. ಕಿರಿಯ ವಕೀಲ ಹುದ್ದೆಗೆ 5 ವರ್ಷ ಕಾನೂನು ಪದವಿ ಪಡೆದವರು ಹಾಗೂ ವಕೀಲ ವೃತ್ತಿಯಲ್ಲಿ ಕನಿಷ್ಠ 2 ವರ್ಷ ಅನುಭವ ಇರುವವರಿಗೆ ಆದ್ಯತೆ ನೀಡಲಾಗಿದೆ. 35 ವರ್ಷ ವಯೋಮಿತಿ ಇದ್ದು, 10,000 ಮಾಸಿಕ ವೇತನದೊಂದಿಗೆ ಇತರ ಭತ್ಯೆ 1,000 ರೂ. ಇರಲಿದೆ.

ಉಳಿದ ಹುದ್ದೆಗಳ ವಿವರ: ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಂಕಾಂ/ಸಿಎ/ಬಿಕಾಂ ಪದವಿ ಕೇಳಲಾಗಿದ್ದು, ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 5ರಿಂದ 7 ವರ್ಷ ವೃತ್ತಿ ಅನುಭವ, ಎಂಎಸ್​ ಆಫೀಸ್​, ಎಂಎಫ್​​ ಎಕ್ಸೆಲ್​, ಟ್ಯಾಲಿ ಸೇರಿ ಇತರ ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ. ಮುಖ್ಯ ಆರ್ಥಿಕ ವಿಶ್ಲೇಷಕರಿಗೆ 1,25,000 ರೂ., ರಿಸರ್ಚ್​ ಆ್ಯಂಡ್​ ಅಕೌಂಟಿಂಗ್​ಗೆ 50,000 ರೂ. ಹಾಗೂ ಅಕೌಂಟಿಂಗ್​ ಕ್ಲರ್ಕ್​ ಹುದ್ದೆಗೆ 25,000 ರೂ. ಜತೆಗೆ ಇತರ ಭತ್ಯೆ ಇರಲಿದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾದ ವಿಳಾಸಕ್ಕೆ ನೇರವಾಗಿ ಅರ್ಜಿ ಸಲ್ಲಿಸತಕ್ಕದ್ದು. ಅಥವಾ ನೀಡಿರುವ ಇ&ಮೇಲ್​ ವಿಳಾಸಕ್ಕೆ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ವೃತ್ತಿ ಅನುಭವ ಮತ್ತು ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 26.5.2022

ಅರ್ಜಿ ಸಲ್ಲಿಸಬೇಕಾದ ವಿಳಾಸ: splocaima-21@ka.gov.in ಅಥವಾ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ ಕಾರ್ಯಾಲಯ, 3ನೇ ಮಹಡಿ, ವಿಶ್ವೇಶ್ವರಯ್ಯ ಚಿಕ್ಕ ಗೋಪುರ, ಪೋಡಿಯಂ ಬ್ಲಾಕ್​, ಡಾ.ಅಂಬೇಡ್ಕರ್​ ವೀದಿ, ಬೆಂಗಳೂರು-560001

ಅಧಿಸೂಚನೆಗೆ: https://bit.ly/3sFba1v

ಮಾಹಿತಿಗೆ: imaclaims.karnataka.gov.i

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net