ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಸಾವನ್ನಪ್ಪಿದ ಉಪನ್ಯಾಸಕ

28ANKOLA2
Published on

ಅಂಕೋಲಾ: ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು, ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ಬೆಳೆಸೆ ಸಮೀಪ ನಡೆದಿದೆ.

ತಾಲೂಕಿನ ವಾಸರೆ ಕುದ್ರಿಗೆಯ ಆಗೇರ ಕಾಲನಿಯ ಅರವಿಂದ ಬೀರಾ ಆಗೇರ (47) ಮೃತಪಟ್ಟ ಉಪನ್ಯಾಸಕ.

ಈತ ವಾಸರೆಕುದ್ರಿಗೆಯಿಂದ ಅಂಕೋಲಾಕ್ಕೆ ಕರ್ತವ್ಯಕ್ಕೆ ಕಾಲೇಜಿಗೆ ಬರುತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಅಪಘಾತದ ತೀವ್ರತೆಗೆ ತಲೆ ಭಾಗಕ್ಕೆ ಪೆಟ್ಟು ಬಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇವರು ಪಟ್ಟಣದ ಪಿ.ಎಂ. ಪದವಿ ಪೂರ್ವ ಕಾಲೇಜ್​ನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದರು. ಘಟನೆ ಕುರಿತು ಬೆಳಸೆಯ ಶಂಕರ ವಿಠೋಬ ಗೌಡ ಪೊಲೀಸ್ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net