ರಾಮನಗರದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿ

FotoJet (1)
Published on

ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಧಾ ಚಾಲನೆ

ರಾಮನಗರ : ಆದಿಕವಿ ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಹಾಗೂ ಜೀವನದ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪಾಧ್ಯಾಪಕಿ ಡಾ. ಬಿ. ಎಸ್. ಸುಧಾ ಕರೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸವಾಜ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ವಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಇದ್ದ ಒಬ್ಬ ವ್ಯಕ್ತಿಯ ಜಯಂತಿಯನ್ನು ನಾವು ಇಂದೂ ಆಚರಿಸಬೇಕಾದರೆ ಆ ವ್ಯಕ್ತಿಯ ಆದರ್ಶ ಮತ್ತು ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. 12ನೇ ಶತವಾನದಲ್ಲಿ ಬಸವಣ್ಣನವರು ಹೇಳಿದ ವಚನಗಳಾಗಿರಬಹುದು, ಅಂಬೇಡ್ಕರ್ ಅವರು ಹೇಳಿರುವ ಸಿದ್ಧಾಂತಗಳಾಗಿರಬಹುದು ಇವೆಲ್ಲದರ ಮೂಲತತ್ವ ಶ್ರೀ ವಾಲ್ಮೀಕಿ ಅವರಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು ಎಂದರು.
ವಾಲ್ಮೀಕಿಯು ಈಗಲೂ ಪ್ರಸ್ತುತವಾಗುತ್ತಿರುವುದು ಎರಡು ಕಾರಣಗಳಿಂದ, ಒಂದು ಅವರ ವ್ಯಕ್ತಿತ್ವದಿಂದ ಮತ್ತೊಂದು ಅವರು ಕಟ್ಟಿಕೊಟ್ಟಂತಹ ರಾವಾಯಣ ಮತ್ತು ಅದರಲ್ಲಿ ಬರುವ ರಾಮನ ವ್ಯಕ್ತಿತ್ವದಿಂದ. ನಾವು ಯಾವುದಾದರೂ ವ್ಯಕ್ತಿಯನ್ನು ಆರಾಧನೆ ವಾಡಬೇಕಾದರೆ ಕೇವಲ ವ್ಯಕ್ತಿಯನ್ನಾಗಿ ಆರಾಧಿಸುವುದಿಲ್ಲ. ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರು ವ್ಯಕ್ತಿಯಾಚೆಗೆ ಮೀರುವಂಥ ಪೂಜನೀಯರಾಗಿ ಬೆಳೆಯಲು ಕಾರಣ ಅವರು ಸಾವಾಜಿಕ ನ್ಯಾಯ ಮತ್ತು ಮೌಲ್ಯ ಎತ್ತಿ ಹಿಡಿದದ್ದರಿಂದ. ಹಾಗೆಯೇ ವಾಲ್ಮೀಕಿಯೂ ಅಂತಹ ವ್ಯಕ್ತಿತ್ವಗಳಲ್ಲಿ ಮೊದಲು ಬರುತ್ತಾರೆ ಎಂದು ಹೇಳಿದರು.
ವಾಲ್ಮೀಕಿ ಆದಿಕವಿ ಮಾತ್ರವಲ್ಲ, ಮಹಾನ್ ವಾನವತಾವಾದಿ ಹಾಗೂ ಆದರ್ಶವಾದಿಯಾಗಿದ್ದರು. ಹಾಗಾಗಿಯೇ ಅವರು ಅಂದು ಬರೆದ ರಾವಾಯಣವು ಇಂದಿಗೂ ಉಳಿದುಕೊಂಡು ಲಕ್ಷಾಂತರ ರೂಪಾಂತರಗಳನ್ನು ಹೊಂದಿದೆ ಎಂದರು.
ರಾಮನು ಕೇವಲ ಒಂದು ಸಂಸ್ಕೃತಿಯ ನಾಯಕನಾಗದೆ ಇಡೀ ಭಾರತದ ಹಾಗೂ ವಿಶ್ವದ ನಾಯಕನಾಗಿ ಉಳಿದುಕೊಂಡಿದ್ದಾನೆ. ನಾವು ವಾಲ್ಮೀಕಿ, ರಾಮ, ರಾವಾಯಣ, ಈ ಮೂರನ್ನು ವಿಭಿನ್ನ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಒಂದಕ್ಕೊಂದು ಬೆಸೆದುಕೊಂಡಿದೆ. ಇವರು ಕಟ್ಟಿಕೊಟ್ಟಂತಹ ಪಾತ್ರಗಳು ಹಾಗೂ ಸಾವಾಜಿಕ ಮೌಲ್ಯಗಳು ಒಂದು ಸವಾಜಕ್ಕೆ ಸೀಮಿತವಾದುದಲ್ಲ, ಅದು ಹಲವು ಸವಾಜಗಳು ಹಾಗೂ ವ್ಯಕ್ತಿತ್ವಗಳದ್ದು ಎಂದು ನಾವು ಅರ್ಥ ವಾಡಿಕೊಳ್ಳಬೇಕು ಎಂದರು.
ಸವಾಜದಲ್ಲಿ ರಾಮನನ್ನು ಯಾರು ಬೇಕಾದರೂ ಆರಾಧಿಸಬಹುದು ಮತ್ತು ಒಪ್ಪಿಕೊಳ್ಳಬಹುದು ಅಥವಾ ನಿರಾಕರಿಸಲೂ ಬಹುದು, ಪೂಜೆ ವಾಡಬಹುದು. ರಾವಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರ, ಸನ್ನಿವೇಶ ಮತ್ತು ಟನೆಗಳು ಒಂದೊಂದು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತವೆ ಎಂದು ತಿಳಿಸಿದರು.
ಅತಿಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯದ ಮುಖಂಡರಿಗೆ ಸನ್ಮಾನ ವಾಡಲಾಯಿತು.
ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಸವಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುವಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಜಿ.ಬಿಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸತೀಶ್, ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ವಾಸು ನಾಯಕ, ಮುಖಂಡರಾದ ಟಿ.ವೆಂಕಟೇಶ್, ಕೃಷ್ಣ, ಸಿದ್ದರಾಜು, ರಮೇಶ್, ಉಮೇಶ್, ಅಂಜಿನಪ್ಪ ಇದ್ದರು.

ಬೆಳ್ಳಿರಥದಲ್ಲಿ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net