ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಎಲ್ಲ ಸೇವೆಗಳು ಮರು ಆರಂಭ

Kukke 14 jan 20
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋವಿಡ್​ 3ನೇ ಅಲೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಲ್ಲ ಸೇವೆಗಳು ಈಗ ಪುನರಾರಂಭಗೊಂಡಿವೆ.

ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠಾಪನೆ, ತುಲಾಭಾರ, ಶೇಷ ಸೇವೆ, ರಥೋತ್ಸವ, ಪಾಲಕಿ ಉತ್ಸವ, ಬಂಡಿ ಉತ್ಸವ ಸಹಿತ ಎಲ್ಲ ಸೇವೆಗಳಿಗೂ ಮಂಗಳವಾರದಿಂದ ಅವಕಾಶ ನೀಡಲಾಗಿದೆ.

ಭಕ್ತರಿಗೆ ಭೋಜನ ಪ್ರಸಾದ, ಲಡ್ಡು, ಪಂಚ ಕಜ್ಜಾಯ, ಪ್ರಸಾದ, ತೀರ್ಥ ಬಾಟ್ಲಿ, ಗಂಧ ಪ್ರಸಾದ, ತೀರ್ಥ ಪ್ರಸಾದ ವಿತರಣೆ ಪ್ರಾರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net