ದಾವಣಗೆರೆಯ ನ್ಯಾಮತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಅಪಘಾತ

New Project (3)
Published on

ದಾವಣಗೆರೆ: ನ್ಯಾಮತಿ ತಾಲೂಕು ಗೋವಿನಕೋವಿ ಸಮೀಪದ ಹರಳಹಳ್ಳಿಯಲ್ಲಿ ಬುದವಾರ ನಸುಕಿನಲ್ಲಿ ಕೆಎಸ್ಸಾರ್ಟಿಸಿ ಬಸ್ ಅಪಘಾತಕ್ಕೀಡಾಗಿದೆ.

ಮೈಸೂರಿನಿಂದ ಹೊನ್ನಾಳಿ ಕಡೆಗೆ ಹೊರಟಿದ್ದ ಬಸ್​, ಮಾರ್ಗಮಧ್ಯೆ ಗೋವಿನಕೋವಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ವಾರದಲ್ಲಿ 2 ಅಪಘಾತ: ನ್ಯಾಮತಿ ತಾಲೂಕಿನಲ್ಲಿ ಐದಾರು ದಿನದ ಹಿಂದೆಯೂ 2 ಖಾಸಗಿ ಬಸ್​ಗಳು ಅಪಘಾತಕ್ಕೀಡಾಗಿದ್ದವು. ಸಾಲಬಾಳು-ಸುರಹೊನ್ನೆ ಗ್ರಾಮಗಳ ಮಾರ್ಗಮಧ್ಯೆ ಎರಡು ಖಾಸಗಿ ಬಸ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಓವರ್​ಟೇಕ್​ ಮಾಡುವ ಭರದಲ್ಲಿ ಬಸ್​ ಚಾಲಕರು ಮುಂದಾಗಿದ್ದರಿಂದ ಅಪಘಾತ ಸಂಭವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net