ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

Kickboxing mysuru nikhil life lis tragic end
Published on

ಬೆಂಗಳೂರು: ಕಿಕ್ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ನಿಖಿಲ್ (24) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಜುಲೈ 10ರಂದು ಕಿಕ್ ಬಾಕ್ಸಿಂಗ್​ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಖಿಲ್​ ಪಾಲ್ಗೊಂಡಿದ್ದರು.

ಕಿಕ್ ಬಾಕ್ಸಿಂಗ್​ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್​ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್​ನಲ್ಲೇ ನಿಖಿಲ್​ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಎರಡು ದಿನ ಕೋಮಾದಲ್ಲಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು. ನಿಖಿಲ್ ತಂದೆ ಬಾಕ್ಸರ್ ಆಗಿದ್ದರು. ಕಿಕ್ ಬಾಕ್ಸಿಂಗ್​ನಲ್ಲಿ ಹೆಸರು ಮಾಡಬೇಕೆಂದು ನಿಖಿಲ್​ ಕನಸು ಕಂಡಿದ್ದ. ಆದರೆ, ವಿಧಿಯಾಟದ ಮುಂದೆ ನಿಖಿಲ್​ರ ಜೀವವೇ ಕರಗಿದೆ.

ಕಿಕ್ ಬಾಕ್ಸಿಂಗ್​ನ ರಿಂಗ್​ನಲ್ಲಿ ನಿಖಿಲ್ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಿಖಿಲ್​ರ ಬದುಕಿನ ಕೊನೇ ಕ್ಷಣ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net