More

    ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

    ರಿಪ್ಪನ್‌ಪೇಟೆ: ತಾಯಿಯ ಸಾವಿನ ನೋವಲ್ಲೂ ವಿದ್ಯಾರ್ಥಿನಿಯೊಬ್ಬಳು ಬಿಎಸ್ಸಿ(ಕೃಷಿ) ಪದವಿ ಪ್ರವೇಶ ಪರೀಕ್ಷೆ ಬರೆದು ನಂತರ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಘಟನೆ ಹೊಸನಗರ ತಾಲೂಕಿನ ಕೋಡೂರು ಶಾಂತಾಪುರದಲ್ಲಿ ನಡೆದಿದೆ.

    ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೀಡಾಗಿದ್ದ ಕೋಡೂರಿನ ಶಾಂತಪುರದ ನಾಗರಾಜ್ ಪತ್ನಿ ಅನುರಾಧಾರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅನುರಾಧಾರ ಅಂತ್ಯಕ್ರಿಯೆ ನಡೆಯಬೇಕಿದ್ದ ದಿನವೇ ಮಗಳು ಸ್ಫೂರ್ತಿಗೆ ಪರೀಕ್ಷೆ ಇತ್ತು. ಕಳೆದ ವರ್ಷ ಕರೊನಾದಿಂದ ಅಜ್ಜ-ಅಜ್ಜಿಯನ್ನು ಕಳೆದುಕೊಂಡು ಸ್ಫೂರ್ತಿ ತೀವ್ರ ನೊಂದಿದ್ದರು. ಇದೀಗ ಹೆತ್ತಮ್ಮನ ಸಾವಿಂದ ಕಂಗೆಟ್ಟ ಸ್ಫೂರ್ತಿಗೆ ಏನು ಮಾಡಬೇಕೆಂದು ಕೆಲ ಸಮಯ ದಿಕ್ಕೇ ತೋಚದಂತಾಗಿತ್ತು.
    ಸ್ಫೂರ್ತಿ ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕ ಪಡೆದ ಸ್ಫೂರ್ತಿಗೆ ಬಿಎಸ್‌ಸಿ ಕೃಷಿ ಪದವಿ ಪಡೆಯುವ ಮಹದಾಸೆ. ಈಕೆಯ ಅಮ್ಮನಿಗೂ ಮಗಳು ಕೃಷಿ ಪದವಿ ಪಡೆಯಬೇಕೆಂಬ ಕನಸಿತ್ತು. ಪರೀಕ್ಷೆಗೆ ಹೋಗುವ ಮುನ್ನವೇ ಅಮ್ಮನ ಸಾವು ಸ್ಫೂರ್ತಿಗೆ ಆಘಾತ ನೀಡಿತ್ತು.

    ಅನಾರೋಗ್ಯದಿಂದ ಬಳಲುತ್ತಿದ್ದ ಅನುರಾಧಾ ಸೋಮವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಅಂದು ಸಂಜೆಯೇ ಪಾರ್ಥಿವ ಶರೀರವನ್ನು ಮನೆಗೆ ತರಲಾಗಿತ್ತು. ಬಿಎಸ್‌ಸಿ ಕೃಷಿ ಪದವಿ ಪ್ರವೇಶಕ್ಕೆ ಮಂಗಳವಾರ ಪ್ರಾಯೋಗಿಕ ಪರೀಕ್ಷೆ ನಿಗದಿಯಾಗಿತ್ತು. ಅಮ್ಮನ ಸಾವಿನ ನೋವಲ್ಲೂ ಹಿರಿಯರ ಅನುಮತಿ ಪಡೆದು ಸ್ಫೂರ್ತಿ, ಮಂಗಳವಾರ ಬೆಳಗ್ಗೆ ಪರೀಕ್ಷೆಗೆ ಹಾಜರಾದರು. ಸ್ಫೂರ್ತಿ ಬರುವವರೆಗೂ ಅಂತ್ಯಸಂಸ್ಕಾರ ಮಾಡದೆ ಕುಟುಂಬಸ್ಥರು ಕಾಯುತ್ತಿದ್ದರು. ಪರೀಕ್ಷೆ ಬರೆದು ಸ್ಫೂರ್ತಿ ಬರುತ್ತಿದ್ದಂತೆ ಅನುರಾಧಾಗೆ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು.

    ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರನಿಗೆ ಕಂಕಣ ಭಾಗ್ಯ: ಮನೋರಂಜನ್​ರ ಕೈಹಿಡಿಯಲಿರುವ ವಧು ಯಾರು?

    ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

    ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts