

ಬೆಂಗಳೂರು: ವಿಧಾನಸಭೆಯಲ್ಲಿ ಕೇಸರಿ ಶಾಲಿಗೆ ಸಂಬಂಧಿಸಿದ ಸ್ವಾರಸ್ಯಕರ ಘಟನೆಯೊಂದು ನಡೆಯಿತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಾಹ್ನ ಕಲಾಪಕ್ಕೆ ಆಗಮಿಸಿ ತಮ್ಮ ಸ್ಥಾನದಲ್ಲಿ ಆಸೀನರಾಗುವ ವೇಳೆ ಸಚಿವ ಪ್ರಭುಚವ್ಹಾಣ್ ಹಾಗೂ ಆರ್.ಅಶೋಕ್ ಗುಸುಗುಸು ಚರ್ಚೆಯಲ್ಲಿದ್ದರು. ಸಿದ್ದರಾಮಯ್ಯರನ್ನು ನೋಡುತ್ತಿದ್ದಂತೆ ಪ್ರಭುಚವ್ಹಾಣ್ ಕೈಮುಗಿದರು. ಅಶೋಕ್, ನೀವು ಯಾರಿಗೆ ಕೈಮುಗಿದಿದ್ದು ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಆ ಕೇಸರಿ ಶಾಲು ಹಾಕಿದವರಿಗೆ ಎಂದು ಸಿದ್ದರಾಮಯ್ಯ ಹೇಳಿದಾಗ ಅಶೋಕ್ ನಕ್ಕರು. ಪಕ್ಕದಲ್ಲೇ ಕುಳಿತ ಮಾಧುಸ್ವಾಮಿಗೆ ನೀವು ಕೇಸರಿ ಶಾಲು ಹಾಕಲ್ವ ಎಂದು ಕೇಳಿದಾಗ, ಹಾಕಲ್ಲ ಹಾಕಲ್ಲ ಹಾಕಲ್ಲ ಎಂದು ತಲೆ ಆಡಿಸಿದರು. ಅಶೋಕ್ ಮತ್ತು ಪ್ರಭುಚವ್ಹಾಣ್ ಮುಖದಲ್ಲಿ ನಗುವೋ ನಗು.