ಎಂಇಎಸ್-ಶಿವಸೇನೆ ವಿರುದ್ಧ ಕನ್ನಡಿಗರ ಕಹಳೆ: ಹೋರಾಟಕ್ಕಿಳಿದ ಕರವೇ

belagavi karave protest
Published on

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ)​ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರವೇ ಸೇರಿಂದತೆ ಕನ್ನಡಪರ ಸಂಘಟನೆಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಎಂಇಎಸ್​ ನಿಷೇಧಕ್ಕೆ ಒಕ್ಕೊರಲಿನಿಂದ ಆಗ್ರಹಿಸುತ್ತಿವೆ.

'ಕರವೇ ನಡೆ ಬೆಳಗಾವಿ ಕಡೆ' ಎಂಬ ವಾಕ್ಯದೊಂದಿಗೆ ಬೆಳಗಾವಿಯತ್ತ ಹೊರಟ ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನಾರಾಯಣಗೌಡ ಮತ್ತು ಪ್ರವಿಣ್ ಶೆಟ್ಟಿ ಬಣದ ಕಾರ್ಯಕರ್ತಕರು ಬೆಳಗಾವಿಗೆ ಜಮಾಯಿಸಿದ್ದು, ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾರೆ. ಹೀರೇಬಾಗೇವಾಡಿಗೆ ನೂರಾರು ಕಾರ್ಯರ್ತರೊಂದಿಗೆ ಬಂದ ನಾರಾಯಣಗೌಡ ಪಾದಯಾತ್ರೆ ಹೊರಟಿದ್ದಾರೆ.

ಎಂಇಎಸ್​ ನಿಷೇಧ ಮಾಡಿ ಆದೇಶ ಹೊರಡಿಸದಿದ್ದಲ್ಲಿ ಕರ್ನಾಟಕ ಬಂದ್ ಮಾಡುವ ಬಗ್ಗೆ ಚಿಂತಿಸಲಾಗುವುದು. ಈ ಬಗ್ಗೆ ಬುಧವಾರ ತೀರ್ಮಾನ ಮಾಡುತ್ತೇವೆ ಎಂದು ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಬೆಳಗಾವಿ ಮಾತ್ರವಲ್ಲ, ರಾಜ್ಯಾದ್ಯಂತ ಪತ್ರಿಭಟನೆ ನಡೆಯುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಕನ್ನಡಪರ ಸಂಘಟನೆಗಳು ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್​ ಮತ್ತು ನಾಡಧ್ವಜ ಸುಟ್ಟ ಪುಂಡರ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ವಿಜಯಪುರದಲ್ಲಿ ರಾಯಣ್ಣ ಸಂಘಟನೆ, ದಲಿತ ಸಂಘಟನೆ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, MES ಹಾಗೂ ಶಿವಸೇನೆ ನಿಷೇಧಿಸುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net