ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರೊ.ವೆಂಕಟೇಶಕುಮಾರ್​ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

Prof M Venkateshakumar,
Published on

ಧಾರವಾಡ: ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರೊ.ಎಂ.ವೆಂಕಟೇಶಕುಮಾರ್‌ ಅವರಿಗೆ 'ಕಾಳಿದಾಸ ಸಮ್ಮಾನ್' ಪ್ರಶಸ್ತಿ ಒಲಿದಿದೆ.

ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ 'ಕಾಳಿದಾಸ ಸಮ್ಮಾನ್' ಪ್ರಶಸ್ತಿಗೆ ಧಾರವಾಡದ ವೆಂಕಟೇಶಕುಮಾರ್‌ ಅವರ ಹೆಸರನ್ನು ಆಯ್ಕೆ ಮಾಡಿ ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆ ಪ್ರಕಟಿಸಿದೆ.

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವೆಂಕಟೇಶಕುಮಾರ್‌ ಅವರ ಸೇವೆ ಗುರುತಿಸಿ 2017ನೇ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net