

ಮಂಡ್ಯ: ನಿಮ್ಮ ಪ್ರತಾಪಕ್ಕೆ ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಋಷಿಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಠಾಣೆಗೆ ಸಹಿ ಹಾಕಲು ಕಾಳಿ ಮಠದ ಸ್ವಾಮಿ ಸೋಮವಾರ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ನಾನು ನಿಮ್ಮ ಗಣಿಗಾರಿಕೆ ವಿಚಾರಕ್ಕೆ ಬರುವುದಿಲ್ಲ. ಹಾಗಾಗಿ ನೀವು ಹೆದರುವುದು ಬೇಡ ಎಂದು ರವೀಂದ್ರ ಶ್ರೀಕಂಠಯ್ಯಗೆ ಟಾಂಗ್ ಕೊಟ್ಟರು.
'ಋಷಿಕುಮಾರಸ್ವಾಮಿ ಸ್ವಾಮೀಜಿ ಅಲ್ಲ' ಎಂಬ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಕಾಳಿ ಮಠದ ಸ್ವಾಮಿ, ನಾನು ಸ್ವಾಮೀಜಿ ಅಲ್ಲ ಎಂದು ನನಗೆ ಸರ್ಟಿಫಿಕೇಟ್ ಕೊಡುವುದು ಬೇಡ. ಅದರ ಬದಲು ತಮ್ಮ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿ. ಅವರ ಪ್ರತಾಪಗಳಿಗೆ ಹೆದರಿ ಓಡಿಹೋಗಲು ನಾನು ಸಂಸದೆ ಸುಮಲತಾ ಅಂಬರೀಶ್ ಅಮ್ಮಾ ಅಲ್ಲ ಎಂದರು. (ದಿಗ್ವಿಜಯ ನ್ಯೂಸ್)