More

    ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ… ಎಂದು ಪುನರುಚ್ಚರಿಸುತ್ತಲೇ ಬುರ್ಖಾ ನಿಷೇಧಕ್ಕೂ ಆಗ್ರಹಿಸಿದ ಕಾಳಿ ಮಠ ಸ್ವಾಮಿ

    ಮೈಸೂರು: ಶ್ರೀರಂಗಪಟ್ಟಣದಲ್ಲಿ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ… ಎಂದು ಹೇಳಿಕೆ ನೀಡುವ ಮೂಲಕ ವಿವಾದದ ಕಿಡಿ ಹೊತ್ತಿಸಿ ಒಂದು ದಿನ ಜೈಲಿಗೆ ಹೋಗಿ ಜಾಮೀನು ಮೇರೆಗೆ ಬಿರಡುಗಡೆಯಾಗಿರುವ ಕಾಳಿ ಮಠದ ಋಷಿಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಮಸೀದಿ ತೆರವು ಮಾಡುವುದಾಗಿ ಪುನರುಚ್ಚರಿಸಿದ್ದಾರೆ.

    ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ ಹನುಮ ದೇವಸ್ಥಾನ ಕಟ್ಟಬೇಕು ಎಂಬ ಹೇಳಿಕೆಗೆ ಈಗಲೂ ನಾನು ಬದ್ಧ. ಅಲ್ಲಿ ನನ್ನ ಹನುಮನ ದೇವಸ್ಥಾನವನ್ನು ಕಟ್ಟಲೇ ಬೇಕು. ಇದು ಶ್ರೀರಂಗಪಟ್ಟಣ ಮಾತ್ರವಲ್ಲ, ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ, ಗುಂಪಿನ ಜತೆ ಹೋಗುವುದಿಲ್ಲ. ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ. ಆಜಾನ್ ಕೂಗುವ ಲೌಡ್ ಸ್ಪೀಕರ್‌ಗಳನ್ನು ತೆಗೆದು ಹಾಕಬೇಕು. ಈ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ನಿಮ್ಮ ಬೆದರಿಕೆ, ಕೈ ಕಡಿಯುತ್ತೇವೆ, ಕಾಲು ಕಡಿಯುತ್ತೇವೆ ಎಂಬುದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಶುಕ್ರವಾರ ಮೈಸೂರಿನಲ್ಲಿ ಹೇಳಿದರು.

    ರಾಜ್ಯ ಸರ್ಕಾರ ದೇವಸ್ಥಾನ ಒಡೆದು‌ ಮಸೀದಿ ಕಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೇಗುಲಗಳನ್ನು ನಾವು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ನಮಗೆ ರಕ್ಷಣೆ ಕೊಡಬೇಕು ಎಂದು ಕಾಳಿ ಮಠದ ಸ್ವಾಮಿ ಆಗ್ರಹಿಸಿದರು.

    ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಕಾಳಿ ಮಠದ ಸ್ವಾಮಿ, ರಾಜ್ಯ-ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು.

    ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ. ದೇಶ, ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಬುರ್ಖಾವನ್ನೂ ನಿಷೇಧಿಸಬೇಕು. ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ, ತಂಗಿ, ಅಮ್ಮ ಬರುತ್ತಾರೋ ಹೇಗೆ? ಗೊತ್ತಾಗುತ್ತದೆ. ಪರೀಕ್ಷೆಯನ್ನು ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ? ಶಾಲೆಯ ಶಿಕ್ಷಕರು ತಂದೆ-ತಾಯಿಯಂತೆ. ಸಹಪಾಠಿಗಳು ಸಹೋದರರಂತೆ. ಅವರನ್ನು ಅನುಮಾನಿಸದರೆ ಹೇಗೆ? ಎಂದರು.

    ಶ್ರೀರಂಗಪಟ್ಟಣದ ಮಸೀದಿ ಕುರಿತು ವಿವಾದಿತ ಹೇಳಿಕೆ: ಕಾಳಿ ಮಠದ ಸ್ವಾಮಿಗೆ ಜಾಮೀನು

    ವೈದ್ಯರ ಎಡವಟ್ಟು: ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಯುವಕನಿಗೆ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

    ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!

    ಚಿತ್ರದುರ್ಗದ ಈ ಗ್ರಾಮದಲ್ಲಿ ಕಾಗೆ ಕಾಟಕ್ಕೆ ಬೆಸ್ತುಬಿದ್ದ ಜನ! ರಸ್ತೇಲಿ ಓಡಾಡೋಕು ಬಿಡ್ತಿಲ್ಲ ಕಾಗೆ… ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts