ದುಬೈ, ಅಮೆರಿಕ ಕಂಪನಿಯಲ್ಲಿ ಕೆಲಸದ ಆಸೆ... ಬೆಂಗಳೂರಿನ ಯುವತಿಗೆ 33 ಲಕ್ಷ ರೂ. ವಂಚಿಸಿದ ಕೋಲಾರದ ವ್ಯಕ್ತಿ

cheating fraud
ಸಾಂದರ್ಭಿಕ ಚಿತ್ರ
Published on

ಉಡುಪಿ: ದುಬೈ ಹಾಗೂ ಅಮೆರಿಕದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆಯಲ್ಲಿದ್ದ ಯುವತಿಗೆ ಕೋಲಾರ ಜಿಲ್ಲೆಯ ವ್ಯಕ್ತಿಯೊಬ್ಬ ವಂಚಿಸಿದ್ದು, ಸಂಕಷ್ಟಕ್ಕೆ ಸಿಲುಕಿದ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಕಂಪನಿಯೊಂದರಲ್ಲಿ ಕಲೆನ್​ ಎಕ್ಸಿಕ್ಯೂಟಿವ್​ ಆಗಿರುವ ಶಾಲಿನಿ ವಂಚನೆಗೊಳಗಾದವರು. ಶಾಲಿನಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿ ನಿತಿನ್​ಕುಮಾರ್​ ವಿರುದ್ಧ ಉಡುಪಿ ಸೆನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲೋರ್​ ಮ್ಯಾನೇಜರ್​ ಕೆಲಸ ಕೊಡಿಸುವುದಾಗಿ ಯುವತಿಗೆ ನಂಬಿಸಿದ ನಿತಿನ್​, ಅವರಿಂದ ಹಂತ ಹಂತವಾಗಿ ಒಟ್ಟು 33.65 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ನಿತಿನ್​ ಹೇಳಿದಂತೆ ಶಾಲಿನಿ ಕುಂದಾಪುರ ಶಾಖೆಯ ಯೂನಿಯನ್​ ಬ್ಯಾಂಕ್​ ಖಾತೆಯಿಂದ 22,63,999 ರೂ., ಕೋರಮಂಗಲ ಶಾಖೆಯ ಎಚ್​.ಡಿ.ಎಫ್​.ಸಿ. ಬ್ಯಾಂಕ್​ ಖಾತೆಯಿಂದ 5,85,500 ರೂ. ಹಾಗೂ ತಂದೆಯ ಎಸ್​ಬಿಐ ಖಾತೆಯಿಂದ 5,16,302 ರೂ.ವನ್ನು ಆರೋಪಿಯ ಕೋರಮಂಗಲ ಶಾಖೆಯ ಎಚ್​ಡಿಎಫ್​ಸಿ ಬ್ಯಾಂಕ್​ ಖಾತೆಗೆ ಯುಪಿಐ ಹಾಗೂ ನೆಫ್ಟ್​ ಮೂಲಕ ಪಾವತಿಸಿದ್ದಾರೆ. ನಂತರ ಅರೋಪಿ ಕೆಲಸವನ್ನೂ ಕೊಡಿಸದೆ, ಹಣ ವಾಪಸ್​ ಮಾಡದೆ ಮೋಸ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net