ಕರ್ನಾಟಕದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯವೈಖರಿಗೆ ಜಮ್ಮು-ಕಾಶ್ಮೀರ ಅಧಿಕಾರಿಗಳ ಮೆಚ್ಚುಗೆ

New Project(18)
Published on

ಬೆಂಗಳೂರು: ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಜಮ್ಮು-ಕಾಶ್ಮೀರದ ನೋಂದಣಿ ಇಲಾಖೆ ಅಧಿಕಾರಿಗಳು ಇಲ್ಲಿನ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಖುದ್ದು ಮಾಹಿತಿ ಪಡೆದರು.

ಮೇ 10 ಮತ್ತು 11 ರಂದು ಕರ್ನಾಟಕದಲ್ಲೇ ಇದ್ದ ಜಮ್ಮು-ಕಾಶ್ಮೀರದ ನೋಂದಣಿ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕಾರ್ಯ ವಿಧಾನಗಳ ಬಗ್ಗೆ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಡಾ. ಬಿ.ಆರ್​.ಮಮತಾ ಮಾರ್ಗದರ್ಶನದಲ್ಲಿ ಮಾತಿ ನೀಡಲಾಯಿತು. ಆಡಳಿತ, ನೋಂದಣಿ, ಮುದ್ರಾಂಕ, ಮಾರುಕಟ್ಟೆ ಮೌಲ್ಯ, ಕಾನೂನು, ತಪಾಸಣೆ, ಗಣಕೀಕರಣ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಜಮ್ಮು ಕಾಶ್ಮೀರದ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.

ಕರ್ನಾಟಕಕ್ಕೆ ಆಗಮಿಸಿದ್ದ ಜಮ್ಮು-ಕಾಶ್ಮೀರದ ನೋಂದಣಿ ಇಲಾಖೆ ಅಧಿಕಾರಿಗಳ ತಂಡ.
ಕರ್ನಾಟಕಕ್ಕೆ ಆಗಮಿಸಿದ್ದ ಜಮ್ಮು-ಕಾಶ್ಮೀರದ ನೋಂದಣಿ ಇಲಾಖೆ ಅಧಿಕಾರಿಗಳ ತಂಡ.

ಈ ಸಂದರ್ಭದಲ್ಲಿ ಗಾಂಧಿನಗರ ಉಪನೋಂದಣಿ ಕಚೇರಿಗೂ ಭೇಟಿ ನೀಡಿದ ಜಮ್ಮು-ಕಾಶ್ಮೀರದ ನೋಂದಣಿ ಇಲಾಖೆ ಅಧಿಕಾರಿಗಳಿಗೆ ನೋಂದಣಿ ಪ್ರಕ್ರಿಯೆ, ಹಳೆಯ ಕಡತಗಳ ಡಿಜಿಟಲೀಕರಗಳ ಬಗ್ಗೆ ವಿವರಿಸಲಾಯಿತು. ಕರ್ನಾಟಕದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯ ವಿಧಾನ ಮತ್ತು ಡಿಜಿಟಲೀಕರಗಳ ಬಗ್ಗೆ ಜಮ್ಮು ಕಾಶ್ಮೀರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net