More

    ದಾಖಲೆ ಬರೆದ ಕೆಂಪಡಕೆ ಬೆಲೆ! ಅಡಕೆ ಬೆಳೆಗಾರರ ಮೊಗದಲ್ಲಿ ಸಂತಸ

    ಶಿರಸಿ: ಮಳೆಗಾಲಕ್ಕೂ ಮುನ್ನವೇ ಕೆಂಪಡಕೆ ದರ ಹೆಚ್ಚಾಗಿದ್ದು, ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಒಂದು ಕ್ವಿಂಟಾಲ್​ ಕೆಂಪಡಕೆ ಬೆಲೆ 50 ಸಾವಿರ ರೂ. ದಾಟಿದೆ.

    ಕೆಲ ತಿಂಗಳಿಂದ ಕೆಂಪಡಕೆ ದರದಲ್ಲಿ ಸ್ಥಿರತೆ ಇತ್ತು. ಇದೀಗ ಅಂದರೆ ಮೇ ಮೊದಲ ಎರಡು ವಾರದಲ್ಲಿ ದರ ಏರಿಕೆ ಕಂಡಿದೆ. ಯಲ್ಲಾಪುರ ಮಾರುಕಟ್ಟೆಯಲ್ಲಿ ಮಂಗಳವಾರ ತಲಾ 1 ಕ್ವಿಂಟಾಲ್​ ಕೆಂಪಡಕೆ 54,159 ರೂ.ಗೆ ಮಾರಾಟ ಆಗಿದೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಈ ದರವೇ ಅತಿ ಹೆಚ್ಚಿನದ್ದಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಕೆ ಕ್ವಿಂಟಾಲ್​ಗೆ 47,009 – 50,969 ರೂ.ವರೆಗೆ ಮಾರಾಟವಾಗಿದೆ.

    ಪಾನ್​ ಮಸಾಲಾ ಕಂಪನಿಯವರು ಮಳೆಗಾಲದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಿಸುತ್ತಿದ್ದಾರೆ. ಅಲ್ಲದೆ ಕೆಂಪಡಕೆ ಉತ್ಪಾದನೆ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಇದೆ. ವ್ಯಾಪಾರಿಗಳು ದಾಸ್ತಾನು ಮಾಡಿಟ್ಟುಕೊಳ್ಳಲೂ ಅಡಕೆ ಖರೀದಿ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಬೆಲೆ ಹೆಚ್ಚಾಗುತ್ತಿದೆ ಎಂದು ಟಿಎಸ್​ಎಸ್​ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದ್ದಾರೆ.

    ತಡರಾತ್ರಿ ಬೈಕ್​ನಲ್ಲಿ ಮಹಿಳೆ ಶವ ಸಾಗಿಸುವಾಗ ರಾಮನಗರ ಡಿಸಿ ಕಚೇರಿ ಎದುರೇ ಅಪಘಾತ! ಬಯಲಾಯ್ತು ಗಂಡ-ಹೆಂಡ್ತಿ ರಹಸ್ಯ

    https://www.vijayavani.net/a-car-and-lorry-accident-in-tumkur-teacher-couple-life-is-end/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts