2 ಬಾರಿ ಲಾಟರಿ ಹೊಡೆದು ಸಿಎಂ ಆಗಿದ್ದವರಿಗೀಗ ಅಧಿಕಾರ ಇಲ್ಲ, ಅದಕ್ಕೆ ಏನೇನೋ ಮಾತಾಡ್ತಾರೆ...

renukacharya kota srinivas
Published on

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ, ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತದೆ. ಈ ಇಲಾಖೆ ನಡೆಸುವ ದಾಳಿಗೆ ರಾಜಕೀಯ ನಂಟು ಬೆಸೆಯುವುದು ಸಲ್ಲದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪ್ರತ್ಯೇಕವಾಗಿ ಸುದ್ದಿಗಾರರಿಗೆ ಮಂಗಳವಾರ ಮಾತನಾಡಿದರು.ಐಟಿ ದಾಳಿಗೂ, ಬಿಎಸ್​ವೈಗೂ, ಬಿಜೆಪಿಗೂ, ಐಟಿ ದಾಳಿಗೂ ಸಂಬಂಧವಿಲ್ಲ. ಈ ವಿಚಾರವಾಗಿ ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ. ಆರ್​ಎಸ್ಎಸ್ ಮತ್ತು ಬಿಜೆಪಿಯನ್ನ ಟೀಕಿಸದಿದ್ದರೆ ಎಚ್.ಡಿ.ಕುಮಾರಸ್ವಾಮಿಗೆ ನಿದ್ದೆ ಬರಲ್ಲ. ಎರಡು ಬಾರಿ ಲಾಟರಿ ಹೊಡೆದು ಮುಖ್ಯಮಂತ್ರಿಯಾದವರು. ಅಧಿಕಾರ ಹೋದ ಹತಾಶೆಯಿಂದ ಏನೇನೋ‌ ಹೇಳಿಕೆ ನೀಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಛೇಡಿಸಿದರು.

ಬಿಎಸ್​ವೈ ಯಾತ್ರೆಗೆ ಪಕ್ಷದ ವರಿಷ್ಠರು ತಡೆಯೊಡ್ಡಿಲ್ಲ. ಇಷ್ಟಕ್ಕೂ ಒಂಟಿಯಾಗಿ ಬಿಎಸ್​ವೈ ಸಂಘಟನಾ ಪ್ರವಾಸ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ತಂಡವಾಗಿ ಯಾತ್ರೆ ಕೈಗೊಳ್ಳಲಿದ್ದು, ವರಿಷ್ಠರೇ ಈ ನಿರ್ಧಾರ ಪ್ರಕಟಿಸಿದ್ದಾರೆ. ಉಪ ಚುನಾವಣೆ ಬಳಿಕ ಪ್ರವಾಸ ಮಾಡಲಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.

ಬಿಜೆಪಿಗೂ ಸಂಬಂಧವಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲವೆಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net