ಬೆಂಗಳೂರು ಸೇರಿ ದೇಶದ 22 ಕಡೆ ಐಟಿ ದಾಳಿ

udyoga-incometax
Published on

ಬೆಂಗಳೂರು: ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ಉಡುಪಿ ಸೇರಿದಂತೆ ದೇಶದ 22 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ.

ಬೆಂಗಳೂರಿನ ಎಚ್​ಎಎಲ್ ಬಳಿಯ ಮಣಿಪಾಲ್ ಆಸ್ಪತ್ರೆ ಸೇರಿ ನಗರದ 10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಬೇರೆ ಬೇರೆ ಆಸ್ಪತ್ರೆಗಳನ್ನು ಮಣಿಪಾಲ್ ಸಂಸ್ಥೆ ಖರೀದಿಸಿತ್ತು. ತೆರಿಗೆ ವ್ಯತ್ಯಾಸ ಕಂಡು ಬಂದ ಹಿನ್ನಲೆ ದಾಳಿ ನಡೆಸ‘ಲಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆ ಮಣಿಪಾಲ ಗ್ರೂಪ್​ನ ಫೈನಾನ್ಸ್ ವಿಭಾಗದಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net