ಹೊನ್ನಾವರದಲ್ಲಿ ಬೆಂಕಿಗಾಹುತಿಯಾದ ಮನೆ, ಪ್ರಜ್ಞೆ ತಪ್ಪಿ ಬಿದ್ದ ಮಾಲಕಿ

30hnr4- FIRE
Published on

ಹೊನ್ನಾವರ: ಪಟ್ಟಣದ ಬಾಂದೇಹಳ್ಳದ ಶಾಂತಿನಗರದಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಮನೆ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.

ಬಾಂದೇಹಳ್ಳದ ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಎಂದಿನಂತೆ ಶಾಲೆಗೆ ಹೋಗಿ ಬಂದು ಬಳಿಕ ಚರ್ಚ್​ಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಿ ಬರುತ್ತಿದ್ದರು. ಸಣ್ಣ ಪ್ರಮಾಣದ ಬೆಂಕಿ ಮನೆಯನ್ನು ಆವರಿಸಿಕೊಂಡಿದೆ. ಮನೆ ಹೊತ್ತಿ ಉರಿಯುತ್ತಿದ್ದನ್ನು ಕಂಡು ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.


ಬೆಂಕಿಗಾಹುತಿಯಾದ ಮನೆಯನ್ನು ಕಂಡು ಅಕ್ಕ ಪಕ್ಕದ ಮನೆಯವರು ಆತಂಕಗೊಂಡಿದ್ದಾರೆ. ಮನೆಯೊಳಗಿದ್ದ ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದ ದಳ ಹಾಗೂ ಹೊನ್ನಾವರ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net