ಬೆಡ್​ ಬ್ಲಾಕಿಂಗ್​ ದಂಧೆ: ಇಬ್ಬರು ವೈದ್ಯರು ಸೇರಿ 8 ಮಂದಿ ಸಿಸಿಬಿ ವಶಕ್ಕೆ

bed
Published on

ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಸಂಬಂಧ ಮತ್ತೆ 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದೆ. ಇದರಲ್ಲಿ ಇಬ್ಬರು ಡಾಕ್ಟರ್​ಗಳೂ ಸೇರಿದ್ದಾರೆ.

ನಿನ್ನೆ(ಮಂಗಳವಾರ) ಬೆಡ್​ ಬ್ಲಾಕಿಂಗ್​ ದಂಧೆಯಲ್ಲಿ ನೇತ್ರಾವತಿ ಮತ್ತು ರೋಹಿತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇದರೆ ಬೆನ್ನಲ್ಲೇ ನಿನ್ನೆ ರಾತ್ರಿ ಇಬ್ಬರು ಬಿಬಿಎಂಪಿ ಡಾಕ್ಟರ್​ಗಳು, ಡೇಟಾ ಎಂಟ್ರಿ ಆಪರೇಟರ್​ಗಳು ಮತ್ತು ಅಸಿಸ್ಟೆಂಟ್​ಗಳು ಸೇರಿ 8 ಮಂದಿಯನ್ನು ವಶಕ್ಕೆ ಪಡೆದು ಸಿಸಿಬಿ ತನಿಖೆ ನಡೆಸುತ್ತಿದೆ.

ಬೆಡ್ ದಂಧೆಯಲ್ಲಿ ಡಾಕ್ಟರ್​ಗಳ ಪ್ರಾತ, ಬೆಡ್ ಬ್ಲಾಕರ್ಸ್​ಗಳು ಮತ್ತು ಡಾಕ್ಟರ್​ಗಳ ಜತೆಗಿರುವ ಲಿಂಕ್​ ಬಗ್ಗೆ ಸಿಸಿಬಿ ತನಿಖೆ ಮಾಡುತ್ತಿದೆ. ಸದ್ಯ ಇಬ್ಬರು ಡಾಕ್ಟರ್ ಸೇರಿದಂತೆ ಎಂಟು ಮಂದಿಯನ್ನು ಕೂಲಂಕಷವಾಗಿ ವಿಚಾರಣೆ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net