ರಂಗೇರಿದ ಹೋಳಿ ಸಂಭ್ರಮ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

holi bgm
Published on

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಹೋಳಿ ಹಬ್ಬದ ಸಂಭ್ರಮ ರಂಗೇರಿದೆ. ಇಂದು(ಶುಕ್ರವಾರ) ಬೆಳಗ್ಗೆಯೇ ನಗರದಾದ್ಯಂತ ರಂಗ ಪಂಚಮಿ ಉತ್ಸವದಲ್ಲಿ ಜನತೆ ಮಿಂದೆದ್ದರು.

ಗುರುವಾರ ತಡರಾತ್ರಿ ನಗರದ ಗಲ್ಲಿಗಲ್ಲಿಗಳಲ್ಲಿ ಕಾಮನನ್ನು ಸುಡುವ ಸಂಭ್ರಮ ಎಲ್ಲೆ ಮೀರಿತ್ತು. ಮಕ್ಕಳು, ಮಹಿಳೆಯರು, ಪುರುಷರು ಎಂಬ ಬೇಧವಿಲ್ಲದೆ ಎಲ್ಲರೂ ಬಣ್ಣದಾಟಕ್ಕೆ ಬೀದಿಗಿಳಿದಿದ್ದರು.

ಎತ್ತ ಕಣ್ಣು ಹಾಯಿಸಿದರೂ ಬಣ್ಣದೋಕುಳಿಯ ರಂಗು ಕಳೆಗಟ್ಟಿತ್ತು. ಪುಟಾಣಿಗಳು, ಮಹಿಳೆಯರು ಪಿಚಕಾರಿಯಲ್ಲಿ ಬಣ್ಣ ಸೋಕುತ್ತಿದ್ದರು. ಗುಂಪಾಗಿ ಬಂದು ಮೈ, ಮುಖಕ್ಕೆ ಬಣ್ಣ ಹಚ್ಚಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net