ಅಲ್ಲಾಹು ಅಕ್ಬರ್​ ಘೋಷಣೆ ಕೂಗಿದ ಮಂಡ್ಯ ವಿದ್ಯಾರ್ಥಿನಿಗೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌ ಕೊಟ್ಟ ಮಹಾರಾಷ್ಟ್ರ ಶಾಸಕ

hijab mandya student
Published on

ಮಂಡ್ಯ: ಹಿಜಾಬ್​ ವಿವಾದ ಹಿನ್ನೆಲೆ ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್​ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್' ಎಂದು ಕೂಗಿದ್ದ ಹಿಜಾಬ್​ಧಾರಿ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಮಹಾರಾಷ್ಟ್ರದ ಬಾಂದ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ದಿಕ್ ಭೇಟಿ ನೀಡಿ ಐಫೋನ್‌ ಮತ್ತು ಸ್ಮಾರ್ಟ್‌ವಾಚ್‌ ಗಿಫ್ಟ್‌ ಕೊಟ್ಟಿದ್ದಾರೆ.

ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವ ಮುಸ್ಕಾನ್ ನಿವಾಸಕ್ಕೆ ಭೇಟಿ ನೀಡಿದ ಶಾಸಕ, ಮುಸ್ಕಾನ್‌ಗೆ ಉಡುಗೊರೆ ಕೊಟ್ಟು ಸನ್ಮಾನಿಸಿದ್ದಾರೆ. ಮುಸ್ಕಾನ್ ಘೋಷಣೆ ಕೂಗಿ ನಮ್ಮ ಸಮುದಾಯಕ್ಕೆ ಗೌರವ ತಂದಿದ್ದಾರೆ. ಅಷ್ಟು ಜನರ ಎದುರು ಅಲ್ಲಾಹು ಅಕ್ಬರ್ ಎಂದು ಕೂಗಿದ್ದಾರೆ. ಅದು ನಮಗೆ ಹೆಮ್ಮೆ ಎನ್ನಿಸುತ್ತಿದೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತಿದೆ. ಹಿಜಾಬ್ ಹಾಕಿಕೊಳ್ಳುವುದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧ್ವನಿ ಎತ್ತಿದ್ದಾರೆ ಎಂದು ಜೀಶನ್ ಸಿದ್ದಿಕ್ ಹೇಳಿದರು.

2 ದಿನದ ಹಿಂದೆ ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಕೂಡ, ಮುಸ್ಕಾನಾ ಕುಟುಂಬಕ್ಕೆ ಧೈರ್ಯ ಹೇಳಿ 1 ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net