

ಮಂಡ್ಯ: ಮಂಗಳವಾರ ಸುರಿದ ಧಾರಕಾರ ಮಳೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಣೆಚೆನ್ನಾಪುರ ಗ್ರಾಮದ ಹೊಸಕೆರೆ ಭರ್ತಿಯಾಗಿದೆ. ರಾತ್ರಿಯಿಡೀ ಬಿಟ್ಟೂಬಿಡದೆ ಸುರಿದ ಮಳೆಗೆ ಒಂದೇ ರಾತ್ರಿಯಲ್ಲಿ ಕೆರೆ ಕೋಡಿಯಾಗಿದೆ.
ಮೂರು ದಶದಿಂದ ತುಂಬದ ಕೆರೆ, ಈ ಭಾರಿ ವರ್ಷದ ಮೊದಲ ಮಳೆಯಲ್ಲೇ ಭರ್ತಿಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಕೆರೆ ಕೋಡಿ ಬಿದ್ದ ಹಿನ್ನಲೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಾಗಿನ ಸಲ್ಲಿಸಿದರು.