

ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಸಾವು-ನೋವಿನ ಸರಣಿ ಮುಂದುವರಿದಿದೆ. ನಿನ್ನೆ ಚಿಕ್ಕೋಡಿಯ ರಾಮನಗರದ ಬಳಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದ 12 ವರ್ಷದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಕಿರಣ ಶಾನೂರ ವಿಭೂತಿ ಮೃತ ದುರ್ದೈವಿ. ಬಾಲಕಿ ಶವ ಪತ್ತೆಯಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.