ಆದಿಚುಂಚನಗಿರಿಯಲ್ಲಿ ರಥೋತ್ಸವ ವೇಳೆ ಅವಘಡ: ಹೃದಯಾಘಾತದಿಂದ ವೃದ್ಧೆ ಸಾವು

New Project(32)
Published on

ಮಂಡ್ಯ: ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಗಂಗಾಧರೇಶ್ವರಸ್ವಾಮಿ ರಥೋತ್ಸವಕ್ಕೆ ಆಗಮಿಸಿದ್ದ ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಮೈಸೂರು ನಗರದ ಕಸ್ತೂರಿಬಾ ನಗರ ನಿವಾಸಿ ಮಹದೇವಮ್ಮ(65) ಮೃತರು. ಇಂದು ಮುಂಜಾನೆ 4.58ರ ಬ್ರಾಹ್ಮಿ ಮುಹೂರ್ತದಲ್ಲಿ ರಥೋತ್ಸವ ನೆರವೇರಿತು. ರಥೋತ್ಸವ ಕಣ್ತುಂಬಿಕೊಂಡ ಬಳಿಕ ಹಿಂತಿರುಗುತ್ತಿದ್ದ ಮಹದೇವಮ್ಮ ಅಲ್ಲೇ ಕುಸಿದು ಬಿದ್ದರು. ತಕ್ಷಣ ವೃದ್ಧೆಯನ್ನು ಕುಟುಂಬಸ್ಥರು ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net