ವೋಟ್ ಕೇಳ್ವಾಗ ನಿಮ್​ ಕಾಲು ಹಿಡ್ದಿದ್ದೆ, ಈಗ ಕೆಲ್ಸ ಆಗ್ಬೇಕು ಅಂದ್ರೆ ನೀನು ನನ್​ ಕಾಲು ಹಿಡಿ: ಗ್ರಾಪಂ ಅಧ್ಯಕ್ಷನ ದರ್ಪ​

1237575
Published on

ಮೈಸೂರು: ಚುನಾವಣೆ ವೇಳೆ ವೋಟ್​ಗಾಗಿ ಕಾಲು ಹಿಡೀತಾರೆ, ಗೆದ್ದ ಮೇಲೆ ಅದೇ ಕಾಲನ್ನೇ ಕಚ್ಚುತ್ತಾರೆ... ಎಂಬ ಮಾತು ಈ ಪ್ರಕರಣಕ್ಕೆ ಹಿಡಿದ ಕನ್ನಡಿ. 'ವೋಟ್ ಕೇಳ್ವಾಗ ನಾನು ನಿಮ್​ ಕಾಲು ಹಿಡಿದಿದ್ದೆ, ಈಗ ನಿನಗೆ ಮನೆ ಬೇಕು ಅಂದ್ರೆ ನನ್​ ಕಾಲು ಹಿಡಿ...' ಎಂದು ವಸತಿ ವಂಚಿತನಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ಅವಾಜ್​ ಹಾಕಿದ್ದಾನೆ.

ಇಂತಹ ಘಟನೆ ಎಚ್.ಡಿ.ಕೋಟೆ ತಾಲೂಕಿ‌ನ ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ಸಂಭವಿಸಿದೆ. ಗ್ರಾಪಂ ವ್ಯಾಪ್ತಿಯ ಟೈಗರ್ ಬ್ಲಾಕ್​ನಲ್ಲಿ ನಡೆಯುತ್ತಿದ್ದ ವಾರ್ಡ್ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಶಿವಸ್ವಾಮಿ ಗೌಡ ಅವಾಜ್​ ಹಾಕಿದ್ದಾನೆ.

ವಾರ್ಡ್​ ಸಭೆಯಲ್ಲಿ ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. 15 ವರ್ಷಗಳಿಂದ ಮನೆಗಾಗಿ ಅರ್ಜಿ ಹಾಕುತ್ತಿದ್ದರೂ ಗ್ರಾಮದ ವ್ಯಕ್ತಿಯೊಬ್ಬರ ಆಯ್ಕೆ ಆಗಿರಲಿಲ್ಲ. ಈ ಬಗ್ಗೆ ಅವರು ಸಭೆಯಲ್ಲಿ ಕೇಳಿದರು. ಈ ವೇಳೆ 'ಪಂಚಾಯಿತಿ ಮನೆ ಬೇಕಿದ್ದರೆ ಈಗ ನನ್ನ ಕೈಕಾಲು ಹಿಡಿ' ಎಂದು ಅಧ್ಯಕ್ಷ ಹೇಳಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net