ರಂಗೇರಿದ ಹಾನಗಲ್​ ಉಪ ಸಮರ: ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಎಸ್‌ವೈ, ಸಿಎಂ

ವಿಜಯ'ಪಥ'ದಲ್ಲಿ 'ಕಮಲ'ಪಕ್ಷ; ಹಾನಗಲ್​ ಪ್ರಣಾಳಿಕೆಯಲ್ಲೇನಿದೆ?#BJP #Manifesto #Hanagal #Election - youtube
Published on

ಹಾವೇರಿ: ಹಾನಗಲ್​ ವಿಧಾನಸಭಾ ಉಪ ಚುನಾವಣೆ ಸಮರ ಕಾವೇರಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, 19 ಅಂಶಗಳ ಪ್ರಣಾಳಿಕೆಯನ್ನ ಶನಿವಾರ ಬಿಡುಗಡೆ ಮಾಡಿದೆ. ಅಭ್ಯರ್ಥಿ ಶಿವರಾಜ್ ಸಜ್ಜನರ್ ನಿವಾಸದಲ್ಲಿ ಪ್ರಣಾಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಸಚಿವ ಡಾ.ಕೆ.ಸುಧಾಕರ್​ ಮತ್ತಿತರರು ಬಿಡುಗಡೆ ಮಾಡಿದರು.

  • ಹಾನಗಲ್​ ಪಟ್ಟಣದ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಘಡಕ ಆಧುನೀಕರಣ. ಪ್ರತಿ ಮನೆಯಿಂದಲೂ ಒಣ ಮತ್ತು ಹಸಿ ಕಸ ಸಂಗ್ರಹ
  • ಪಟ್ಟಣದ ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಕ್ಕೆ ಕ್ರಮ
  • ಆಟದ ಮೈದಾನಗಳಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ
  • ಪಟ್ಟಣದ ಈಜುಕೊಳಗಳ ನವೀಕರಣ, ಸುಸಜ್ಜಿತ ಈಜುಕೊಳಗಳ ನಿರ್ಮಾಣ
  • ಪಟ್ಟಣದ ಹೊರವಲಯದಲ್ಲಿ ಬಸ್ ತಂಗುದಾಣ ಮತ್ತು ಟ್ರಕ್ ಟರ್ಮಿನಲ್
  • ಔಷಧ ಮಳಿಗೆಗಳಲ್ಲಿ ಎಲ್ಲ ಬಗೆಯ ಔಷಧಗಳ ಮಾರಾಟಕ್ಕೆ ಕ್ರಮ. ಹೊಸ ಜನೌಷಧ ಮಳಿಗೆಗಳ‌ ಸ್ಥಾಪನೆ
  • ಪಟ್ಟಣದಲ್ಲಿ ‌ಸಿಸಿಟಿವಿಗಳ ಅಳವಡಿಕೆ ಮತ್ತು ಪೊಲೀಸ್ ಗಸ್ತು ಸೌಕರ್ಯ
  • ಪ್ರಮುಖ ಸಂಚಾರಿ ರಸ್ತೆಗಳ ಅಭಿವೃದ್ಧಿ, ಪಾದಚಾರಿ ರಸ್ತೆಗಳ ಅಭಿವೃದ್ಧಿ ಸೇರಿ ಒಟ್ಟು 19 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net