ಜೈಲಿಂದ ಹೊರ ಬಂದ ಶ್ರೀಕಿ: ಬಿಟ್​ ಕಾಯಿನ್​ ಪ್ರಕರಣವೇ ಬೋಗಸ್, ಪೊಲೀಸರು ಹೇಳುತ್ತಿರುವುದು ಸುಳ್ಳು...

shriki
Published on

ಬೆಂಗಳೂರು: ಬಿಟ್​ ಕಾಯಿನ್​ ಪ್ರಕರಣ ಬೋಗಸ್​. ಪೊಲೀಸರು ಹೇಳುತ್ತಿರುವುದು ಸುಳ್ಳು. ಕೋಟಿ ಕೋಟಿ ಹಣ ಸೀಜ್​ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹ್ಯಾಕರ್​ ಶೀಕಿ ಹೇಳಿದ್ದಾರೆ.

ಜೀವನ್ ಭೀಮಾನಗರದ ಖಾಸಗಿ ಹೋಟೆಲ್​ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದ ಶ್ರೀಕಿ ಜಾಮೀನಿನ ಮೇರೆಗೆ ಬುಧವರಾ ಮಧ್ಯಾಹ್ನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದರು. ಜೈಲಿಂದ ಹೊರ ಬಂದ ಬಳಿಕ ಮಾಧ್ಯಮದವರಿಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಶ್ರೀಕಿ, ಬಿಟ್ ಕಾಯಿನ್ ಪ್ರಕರಣ ಬೋಗಸ್. ಪೊಲೀಸರು ಹೇಳುತ್ತಿರುವುದು ಸುಳ್ಳು. ಕೋಟಿ ಕೋಟಿ ಹಣ ಸೀಜ್ ಬಗ್ಗೆ ಗೊತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು. ಬಳಿಕ ಆಟೋದಲ್ಲಿ ಹೆಬ್ಬಾಳದತ್ತ ಶ್ರೀಕಿ ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net