ಲಂಚ ಸ್ವೀಕರಿಸುತ್ತಿರುವಾಗಲೇ ಸಿಕ್ಕಿಬಿದ್ದ ಸಿ.ಎಸ್.​ ಪುರ ಪಿಎಸ್​ಐ- ಮುಖ್ಯಪೇದೆ!

New Project(2)
Published on

ತುಮಕೂರು: ಲಂಚ ಸ್ವೀಕರುತ್ತಿರುವಾಗಲೇ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಸಿಎಸ್​ ಪುರ ಪಿಎಸ್ಐ ಸೋಮಶೇಖರ್​ ಮತ್ತು ಮುಖ್ಯಪೇದೆ ಅಹಮದ್ ಸಿಕ್ಕಿಬಿದ್ದಿದ್ದಾರೆ.

ಗುಬ್ಬಿ ತಾಲೂಕಿನ ಸಿಎಸ್ ಪುರದಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹ ಪ್ರಕರಣ ಸಂಬಂಧ ಚಂದ್ರಣ್ಣ ಎಂಬುವರ ಬಳಿ ಪಿಎಸ್ಐ ಸೋಮಶೇಖರ್ 28 ಸಾವಿರ ರೂಪಾಯಿ ಲಂಚ ಕೇಳಿದ್ದರು. ಮುಂಗಡವಾಗಿ 12 ಸಾವಿರ ರೂಪಾಯಿಯನ್ನ ಈ ಹಿಂದೆಯೇ ಪಡೆದಿದ್ದ ಪಿಎಸ್​ಐ, ಬುಧವಾರ ಬಾಕಿ 16 ಸಾವಿರ ರೂ. ಪಡೆಯುವಾಗ ತುಮಕೂರು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇದೇ ವೇಳೆ ಎಸಿಬಿ ಕಸ್ಟಡಿಯಿಂದ ತಪ್ಪಿಸಿಕೊಂಡು ಪೇದೆ ನಯಾಸ್ ಓಡಿದ್ದರು. ಇವರನ್ನ ಬೆನ್ನತ್ತಿದ ಎಸಿಬಿ ಪೇದೆಯನ್ನ ಹಿಡಿದು ಕಸ್ಟಡಿಗೆ ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net