More

    ‘ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?’ ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ಬೆಂಗಳೂರು: ‘ವೆಂಕಟೇಶ್,​ ನಾನು ನಿಜವಾಗ್ಲೂ ಹೀರೋ ಆಗ್ತೀನಾ?’ ಅಂತ ಪುನೀತ್​ ರಾಜ್​ಕುಮಾರ್​ ಅವರು 20 ವರ್ಷದ ಹಿಂದೆ ಅಪ್ಪುವೆಂಕಟೇಶ್​ ಎಂಬುವರನ್ನ ಕೇಳಿದ್ದರಂತೆ… ಆ 24 ವರ್ಷದ ಹಿಂದಿನ ಘಟನೆ ಜತೆ ಹಲವು ಕುತೂಹಲ ವಿಷಯಗಳನ್ನ ಅಪ್ಪು ವೆಂಕಟೇಶ್​ ಭಾವುಕರಾಗಿಯೇ ‘ದಿಗ್ವಿಜಯ ನ್ಯೂಸ್’ ಜತೆ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಅಪ್ಪು ವೆಂಕಟೇಶ್​ ಯಾರು ಗೊತ್ತಾ? ‘ಅಪ್ಪು’ ಸಿನಿಮಾ ತೆರೆ ಕಾಣುವ ಮೊದಲೇ ಅಂದರೆ 1996ರಿಂದ ಪುನೀತ್​ ಅವರಿಗೆ ಜಿಮ್ನಾಸ್ಟಿಕ್​ ತರಬೇತಿ ಕೊಟ್ಟವರು.

    ಡಾ.ರಾಜ್​ ಅವರ ಮನೆಯ ಮೆಟ್ಟಿಲು ಹತ್ತೋಕೆ ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ನಾನು ಮೊದಲು ತರಬೇತಿ ಕೊಡಲು ಶುರು ಮಾಡಿದ್ದೇ ಅಪ್ಪು ಅವರಿಗೆ. ಅಪ್ಪು ಅವರಿಗೆ ಆ್ಯಕ್ಷನ್​ ಮೂವಿ ಅಂದ್ರೆ ಇಷ್ಟ. ಹಾಗಾಗಿಯೇ ಅಪ್ಪು ಮೂವಿಯಲ್ಲಿ ಅಭಿನಯಿಸೋಕು 7 ವರ್ಷ ಮೊದಲೇ ಫೈಟಿಂಗ್​ ತರಬೇತಿ ಪಡೆದರು. ತರಬೇತಿಯ ಆರಂಭದಲ್ಲಿ ‘ವೆಂಕಟೇಶ್​ ನಾನು ನಿಜವಾಗ್ಲೂ ಹೀರೋ ಆಗ್ತೀನಾ?’ ಅಂತ ಅಪ್ಪು ಕೇಳಿದ್ರು. ನಾನು, ‘ಯಾಕ್​ ಅಪ್ಪು ಅವರೇ ನೀವು ಹೀರೋ ಆಗ್ತೀರಿ. ಅಪ್ಪಾಜಿ ಅವರ ಮಗ ನೀವು’ ಅಂದಿದ್ದೆ. ‘ಅಪ್ಪು’ ಸಿನಿಮಾ ಟೈಟಲ್​ ಕೊಟ್ಟಿದ್ದೇ ಶಿವಣ್ಣ. ನಾನು ಅಪ್ಪು ಅವರಿಗೆ ತರಬೇತಿ ಕೊಡುತ್ತಿದ್ದೆ, ಆಗ ಅಪ್ಪಾಜೀ ಅವರು ನನಗೂ ಒಮ್ಮೆ ಜಿಮ್​ ಬಗ್ಗೆ ಹೇಳಿಕೊಡಿ ಎಂದು ಕೇಳಿದ್ರು, ಅವರಿಗೂ ಮಾಡಿಸಿದ್ದೆ. ಅಪ್ಪಾಜಿ ಅವರಿಗೆ ಶಸ್ತ್ರಚಿಕಿತ್ಸೆ ಆಗಿತ್ತು. ಹಾಗಾಗಿ ಅವರು ಆ ಸಮಯದಲ್ಲಿ ಕಾಲನ್ನು ಮಡಚಲು ಆಗುತ್ತಿರಲಿಲ್ಲ. ತಿಂದದ್ದು ಜೀರ್ಣ ಆಗಬೇಕಿಲ್ಲವೇ ಏನಾದರೂ ಹೇಳಿಕೊಡಿ ಅಂತ ಅಪ್ಪಾಜೀ ಹೇಳಿದ್ರು ಎಂದು ವೆಂಕಟೇಶ್​ ವಿವರಿಸಿದರು.

    'ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ಅಪ್ಪುಗೆ ಅಸಾಧ್ಯ ಎಂಬುದು ಇಲ್ಲ. ವಾಲ್​ ಸಮ್ಮರ್​ ಆ್ಯಕ್ಷನ್​ ಮಾಡಿದ್ರು, ‘ರೋಪ್​’ ಅನ್ನೋದು ಅವರಿಗೆ ಇಷ್ಟ ಆಗ್ತಿರಲಿಲ್ಲ. ‘ಆಕಾಶ್’​ ಮೂವಿ ಶೂಟಿಂಗ್​ನಲ್ಲಿ ಚಲಿಸುತ್ತಿದ್ದ ಕಾರಿನ ಗಾಜನ್ನ ಓಡಿಹೋಗಿ ಕಾಲಿನಲ್ಲಿ ಅಪ್ಪು ಹೊಡೆದಿದ್ದರು. ಆ ಸ್ಟಂಟ್​ ಓಕೆ ಆಯ್ತು. ಅಂದು ಕಾಲಿಗೆ ಪೆಟ್ಟಾಗಿ ಸ್ಟಿಚ್​ ಹಾಕಿಸಿಕೊಂಡಿದ್ದರು. ನಮಗೆಲ್ಲ ಭಯ ಆಗ್ತಿತ್ತು ಅಮ್ಮವ್ರು ಬೈದ್ರೆ ಎಂದು. ಆದ್ರೆ ಅಪ್ಪು ಏನೂ ಆಗಿಲ್ಲ ಬನ್ನಿ ಅಂದ್ರು. ಅಪ್ಪು ಅವರ ಪ್ರತಿ ಸಿನಿಮಾದಲ್ಲೂ ಫೈಟಿಂಗ್​ನಲ್ಲಿ ಹೊಸ ಹೊಸ ಸ್ಟಂಟ್ಸ್​ ಇರೋದು. ಮಾಡಬೇಕು ಅಂದ್ರೆ ಮಾಡಬೇಕು ಅನ್ನೋ ಮನಸ್ಥಿತಿ ಪುನೀತ್​ ಅವರದ್ದು. ನನಗೆ ಸುಸ್ತಾಯ್ತು, ಸಾಕು ಇವತ್ತಿಗೆ ಎಂದು ಒಮ್ಮೆಯೂ ಹೇಳಿಲ್ಲ. ನಾನು ‘ಸಾಕು ಅಪ್ಪು, ರೆಸ್ಟ್​ ಮಾಡಿ’ ಅಂದ್ರೂ ಅವರು, ‘ಮಾಡೋಣ ಈಗಲೇ’ ಅಂತಿದ್ದರು… ಎಂದು ವೆಂಕಟೇಶ್​ ನೆನಪಿಸಿಕೊಂಡರು.

    'ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ನನ್ನ ಹೆಸರು ವೆಂಕಟೇಶ್​. ಅಪ್ಪು ಅವರಿಗೆ ನಾನು ಟ್ರೈನಿಂಗ್​ ಕೊಡೋಕೆ ಶುರು ಮಾಡಿದ ಬಳಿಕ ಹಾಗೂ ಅಪ್ಪು ಸಿನಿಮಾನದಲ್ಲಿ ನಾನು ಸಹ ನಟನಾಗಿ ಅಭಿನಯಿಸಿದ ಬಳಿಕ ಅಪ್ಪು ವೆಂಕಟೇಶ್ ಎಂದೇ ಗುರುತಿಸಿಕೊಂಡೆ. ಮೊದಲು ಯುವರಾಜ ಬಂತು. ಅದರಲ್ಲಿ ನಾನೂ ಕೂಡ ಫ್ರೆಂಡ್ಸ್​ ಪಾತ್ರ ನಿರ್ವಹಿಸಿದ್ದೆ ಎನ್ನುತ್ತಲೇ, ಅಪ್ಪು ಅವರು ಓವರ್​ ಜಿಮ್​ ಮಾಡಿದ್ದಕ್ಕೆ ಸಾವಾಯ್ತು ಎಂಬ ಅಪಪ್ರಚಾರವನ್ನ ಕೆಲವರು ಮಾಡ್ತಿದ್ದಾರೆ. ಅಪ್ಪು ಸಿನಿಮಾಗೂ ಮೊದಲು ಮಾಡ್ತಿದ್ದ ವರ್ಕೌಟ್​ಗೆ ಹೋಲಿಸಿದಲ್ಲಿ ಇತ್ತೀಚಿಗೆ ತೀರ ಕಡಿಮೆ ಆಗಿತ್ತು. ಅಪ್ಪು ಎಕ್ಸಸೈಸ್​ ಮಾಡ್ತಿದ್ದರು. ಅಪಪ್ರಚಾರ ಮಾಡಬೇಡಿ. ಅವರು ದೇವರ ಬಳಿ ಇದ್ದಾರೆ. ಇಂಥ ವಿಷ್ಯ ಅವರ ಮನಸ್ಸಿಗೆ ನಿಜಕ್ಕೂ ಬೇಸರ ತರುತ್ತೆ. ಓವರ್​ ಟ್ರೈನಿಂಗ್​ ಬೇಡ, ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ಇರಲಿ ಎಂದು ಮನವಿ ಮಾಡಿದರು.

    'ವೆಂಕಟೇಶ್​, ನಾನು ನಿಜವಾಗ್ಲೂ ಹೀರೋ ಆಗ್ತೀನಾ?' ಎಂದಿದ್ದ ಅಪ್ಪು! ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ವಿಷ್ಯ ಇಲ್ಲಿದೆ

    ‘ಅಪ್ಪು’ ಅಗಲಿಕೆ ನೋವಿನಲ್ಲೇ ನ.10ರಂದು ಮಗಳ ಮದುವೆ… ಭಾವುಕರಾದ ಕುಮಾರ್ ಬಂಗಾರಪ್ಪ

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ನ.16ರಂದು ಅರಮನೆ ಮೈದಾನದಲ್ಲಿ ‘ಪುನೀತ್ ನುಡಿ ನಮನ’ ಕಾರ್ಯಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts