

ತಿ.ನರಸೀಪುರ: ಸಾಂಸ್ಕೃತಿಕ ನಗರಿ ಮೈಸೂರು ಪುರಭವನದಲ್ಲಿ ಮೇ 24 ಮತ್ತು 25 ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಗುರುವಾರ ಬಸವ ಪ್ರಚಾರದ ರಥವನ್ನು ಪಟ್ಟಣದ ವಿದ್ಯೋದಯ ವೃತ್ತದಲ್ಲಿ ಸ್ವಾಗತಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಬಸವ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ತಾಲೂಕು ಅಧ್ಯಕ್ಷ ಸಿ.ಎಂ.ಪ್ರಕಾಶ್ ಅವರು ಪುಷ್ವಾರ್ಚನೆ ಮಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರಥ ಯಾತ್ರೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕುಗಳಿಗೂ ರಥಯಾತ್ರೆ ಸಂಚರಿಸಿ ಬಸವಣ್ಣನವರ ಆದರ್ಶ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಜಿಲ್ಲೆಯಲ್ಲಿ ನಡೆಯುವ ಬಸವ ಜಯಂತಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲು ಈ ರಥಯಾತ್ರೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮುಖಂಡರಾದ ಕರೋಹಟ್ಟಿ ಬಸವರಾಜು, ಬಜ್ಜಿ ಲಿಂಗಪ್ಪ, ಕೆಇಬಿ ಸಿದ್ದಲಿಂಗಸ್ವಾಮಿ, ಕುರುಬೂರು ಶಿವು, ಸಿದ್ದೇಶ್, ತೋಂಟೇಶ್, ಮಾಯಪ್ಪ , ಮಾದಪ್ಪ, ಹಿರಿಯೂರು ಪ್ರಕಾಶ್, ಪರಮೇಶ್ ಪಟೇಲ್, ಸೋಮಶೇಖರಪ್ಪ, ಬಿಲಿಗೆರೆಹುಂಡಿ ಮಹದೇವಸ್ವಾಮಿ, ರಾಜಶೇಖರ್, ಪುರಸಭಾ ಸದಸ್ಯ ಕಿರಣ್, ಡೈರಿ ಗುರುಮೂರ್ತಿ, ವೀರೇಶ್ ಹಾಗೂ ಮತ್ತಿತರರು ಇದ್ದರು.