ಢಕ್ಕೆಬಲಿ ಪರ್ವಕ್ಕೆ ವೈಭವದ ಚಾಲನೆ

chalane
Published on

ಪಡುಬಿದ್ರಿ: ಬಯಲು ಆಲಯ ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯಲಿರುವ ದ್ವೈವಾರ್ಷಿಕ ನಡಾವಳಿ ‘ಢಕ್ಕೆಬಲಿ’ಯ ಪರ್ವಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಬುಧವಾರ ಚಾಲನೆ ನೀಡಲಾಯಿತು.

ಪಡುಬಿದ್ರಿ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮಾಜ ಆಡಳಿತ ಸಂಸ್ಥೆಯಾದ ಶ್ರೀ ವನದುರ್ಗಾ ಟ್ರಸ್ಟ್ ಪದಾಧಿಕಾರಿಗಳು, ಶ್ರೀ ಬ್ರಹ್ಮಸ್ಥಾನದ ಅರ್ಚಕರು, ಪಾತ್ರಿಗಳು, ಗುರಿಕಾರರು, ಸ್ಥಾನಿಗಳು, ಮಾನಿಗಳು, ಊರವರು, ದೇವಸ್ಥಾನ ಪ್ರಮುಖರ ಸಮಕ್ಷಮ ಆದ್ಯ ದೇವತಾ ಪ್ರಾರ್ಥನೆ ನಡೆಸಲಾಯಿತು. ಬಳಿಕ ಎಲ್ಲರ ಕೂಡುವಿಕೆಯೊಂದಿಗೆ ಮೆರವಣಿಗೆಯಲ್ಲಿ ಹೊರೆಕಾಣಿಕೆ ಬ್ರಹ್ಮಸ್ಥಾನದಲ್ಲಿ ಸಮರ್ಪಿಸಲಾಯಿತು. ಬ್ರಹ್ಮಸ್ಥಾನಕ್ಕೆ ಆಗಮಿಸಿ ನೆರೆದವರೆಲ್ಲರ ಸಮಕ್ಷಮ ಢಕ್ಕೆಬಲಿಗಳ ಸಾಂಗತಾ ಸಿದ್ಧಿ ಹಾಗೂ ಮಂಡಲ ಹಾಕುವ ಢಕ್ಕೆಬಲಿ ಸೇವೆ ನಿರ್ವಿಘ್ನತಾ ಸಿದ್ಧಿಗಾಗಿ ಶ್ರೀ ಖಡ್ಗೇಶ್ವರೀ ದೇವಿ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆನುವಂಶಿಕ ಮೊಕ್ತೇಸರ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದ ಅರ್ಚಕರಾದ ರಘುಪತಿ ಆಚಾರ್ಯ, ಕೇಶವ ಆಚಾರ್ಯ ಗುರುರಾಜ ಆಚಾರ್ಯ, ನಂದಕುಮಾರ್ ಆಚಾರ್ಯ, ಸನ್ನಿಧಾನದ ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ, ಗುರಿಕಾರ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ವೈ. ಸುರೇಶ್ ರಾವ್, ಗುರಿಕಾರ ಬಾಲಪ್ಪ ನಟರಾಜ ರಾವ್ ಪಿ.ಎಸ್., ಗುರಿಕಾರ ಮುರುಡಿ ಜಗದೀಶ ರಾವ್, ವನದುರ್ಗಾ ಟ್ರಸ್ಟ್‌ನ ಪದಾಧಿಕಾರಿಗಳಾದ ಗುಡ್ಡೆ ವಿಠಲ ರಾವ್, ಪಿ.ಶ್ರೀನಿವಾಸ ರಾವ್, ಪಿ.ಎಸ್.ರಾಘವೇಂದ್ರ ರಾವ್, ರವೀಂದ್ರನಾಥ ಪಿ.ಎಚ್.ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net