

ಕುದೂರು: ಹೋಬಳಿಯ ಬೆಟ್ಟಹಳ್ಳಿಯಲ್ಲಿರುವ ಕ್ರಿ.ಶ 7ನೇ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ನಿರ್ಮಿಸಿರುವ ಪಂಚಲಿಂಗ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ದೇವಾಲಯದಲ್ಲಿ ಮಹಾಬಲೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ, ಅರ್ಕೇಶ್ವರ, ಮಲ್ಲಿಕಾರ್ಜುನಸ್ವಾಮಿ ಹೀಗೆ ಐದು ಶಿವಲಿಂಗಗಳಿವೆ. ದೇವಸ್ಥಾನದ ಮಧ್ಯದಲ್ಲಿರುವ ನಂದಿಯ ಬಳಿ ನಿಂತು ಸುತ್ತಲೂ ವೀಕ್ಷಿಸಿದರೆ ಈ ಐದು ಲಿಂಗಗಳು ಕಾಣುತ್ತವೆ. ಇದು ಈ ದೇವಸ್ಥಾನದ ವಿಶೇಷ. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುವರು. ಪೂಜೆಯಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.