ಚಿಕ್ಕದೇವಮ್ಮನ ಬೆಟ್ಟದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ

filter: 0; jpegRotation: 0; fileterIntensity: 0.000000; filterMask: 0;
filter: 0; jpegRotation: 0; fileterIntensity: 0.000000; filterMask: 0;
Published on

ಸರಗೂರು: ತಾಲೂಕಿನ ಅಧಿದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಮಂಗಳವಾರ ಹಾಲುಗಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.


ಚಂದ್ರಮಾನ ಯುಗಾದಿ ಹಬ್ಬದ ದಿನದಂದು ಬೆಳಗ್ಗೆಯೇ ದೇವತೆಗೆ ಪೂಜೆ ಸಲ್ಲಿಸಿ, ಅಮ್ಮನವರ ಉತ್ಸವಮೂರ್ತಿಯನ್ನು ಕರೆತಂದು ನದಿ ಬಳಿಯ ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.


ಇದಕ್ಕೂ ಮೊದಲು ಹಾಲುಗಡ ಜಾತ್ರಾ ಕಮಿಟಿ ಪದಾಧಿಕಾರಿಗಳು ವಿಶೇಷ ಪೂಜೆ ನಡೆಸಿ ತಾಲೂಕಿನ ಸಮಸ್ತ ಜನತೆಗೆ ಒಳಿತು ಕರುಣಿಸಲು ಪ್ರಾರ್ಥನೆ ಸಲ್ಲಿಸಿದರು. ಹಾಲುಗಡುವಿನ ಜಪ್ಪದಕಟ್ಟೆಯಲ್ಲಿ ಹೋಮ, ಹವನಗಳು ನಡೆದವು. ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಚಿಕ್ಕದೇವಮ್ಮನ ಬೆಟ್ಟದಿಂದ ಹಾಲುಗಡವರೆಗೂ ಸಿಪಿಐ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಸಬ್‌ಇನ್‌ಸ್ಪೆಕ್ಟರ್ ಮಧು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ಗ್ರಾಪಂ ಅಧ್ಯಕ್ಷ ಜಯರಾಮ, ಇಒ ರಘು, ಮಹದೇವಸ್ವಾಮಿ ಪತ್ತೇದಾರ, ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯಕ, ಕಂದಾಯ ಇಲಾಖೆ ಸಿಬ್ಬಂದಿ, ಆರ್‌ಐ ಮುಜೀಬ್, ಗ್ರಾಮಲೆಕ್ಕಿಗರಾದ ಹೇಮಂತ್, ಸತ್ಯನಾರಾಯಣ, ಮುಖಂಡರಾದ ನಾಗಯ್ಯ, ಚಂದ್ರ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net