ಚನ್ನಿಪುರ ಗ್ರಾಮದಲ್ಲಿ ಅದ್ದೂರಿ ಕೊಂಡೋತ್ಸವ

04 SARAG 1
Published on

ಸರಗೂರು: ತಾಲೂಕಿನ ಚನ್ನಿಪುರ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ಮಾರಮ್ಮ ಹಾಗೂ ಬಸವೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು.


ಹೆಗ್ಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಿಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಗ್ರಾಮದ ಕೆರೆಯಲ್ಲಿ ಗಂಗೆ ಪೂಜೆ ಸಲ್ಲಿಸಿ ಗ್ರಾಮದ ಹೊರ ವಲಯದಲ್ಲಿರುವ ದೇವಾಲಯಕ್ಕೆ ಮೆರವಣಿಗೆಯಲ್ಲಿ ಆಗಮಿಸಲಾಯಿತು.


ಮಾರಮ್ಮದೇವಿಗೆ ಮಹಿಳೆಯರು ವಿವಿಧ ರೀತಿಯ ತಂಬಿಟ್ಟಿನ ಆರತಿಯೊಂದಿಗೆ ಪೂಜೆ ಸಲ್ಲಿಸಲಾಯಿತು.
ಕೊಂಡೋತ್ಸವದ ನಂತರ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಕೊಂಡಕ್ಕೆ ಪೂಜೆ ಸಲ್ಲಿಸಿದರು. ಕೆಲವರು ಬಾಯಿಬೀಗ ಹರಕೆ, ಮುಡಿ ಹರಕೆ ಸಲ್ಲಿಸಿ ದೇವರ ದರ್ಶನ ಪಡೆದರು.


ಗ್ರಾಮದ ಯಜಮಾನ ಪುಟ್ಟರಾಜು, ಚಿಕ್ಕ ಯಜಮಾನ ಸಿದ್ದರಾಜು, ಗ್ರಾಪಂ ಸದಸ್ಯ ಚಿಕ್ಕಶಂಭೇಗೌಡ, ಮಂಜುಳಾ ಚೆಲುವರಾಜು, ಮುಖಂಡರಾದ ಶಿವನಂಜು, ಮಲ್ಲೇಶ್, ಶಿವಣ್ಣ, ಈರಣ್ಣ, ಶಿವರಾಜು, ಸಿ.ಎನ್.ರವಿ, ನಾಗರಾಜು, ಎನ್.ಚಂದ್ರು, ಚೆಲುವರಾಜು, ನಿಂಗರಾಜು, ಚಿನ್ನಸ್ವಾಮಿ ಸೋಮಣ್ಣ, ಕೂಸಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net