ಹುಟ್ಟುಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್​

srinivas prasad
Published on

ಮೈಸೂರು: ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತನ್ನ ಹುಟ್ಟಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.

ನಾನು ಇದುವರೆಗೂ 14 ಚುನಾವಣೆ ಎದುರಿಸಿದ್ದೇನೆ. 12ನೇ ಚುನಾವಣೆಯೇ ಸಾಕಾಗಿತ್ತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. ಅದೇ ನನ್ನ ಕೊನೆಯ ಚುನಾವಣೆ ಆಗುತ್ತಿತ್ತು. ಆದರೆ, ಅನಿವಾರ್ಯವಾಗಿ ಮತ್ತೆರಡು ಚುನಾವಣೆ ಎದುರಿಸಬೇಕಾಯ್ತು. ಇನ್ಮುಂದೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಶುಕ್ರವಾರ ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್​ ಹೇಳಿದರು.

ಇದುವರೆಗಿನ ರಾಜಕೀಯ ಜೀವನದ ಬಗ್ಗೆ ನನಗೆ ತೃಪ್ತಿ ಇದೆ. ಸದ್ಯ ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ. ಇನ್ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುತ್ತಲೇ ಚುನಾವಣಾ ರಾಜಕೀಯಕ್ಕೆ ವಿ.ಶ್ರೀನಿವಾಸ ಪ್ರಸಾದ್ ಗುಡ್‌ಬೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net