ಸಾಧನೆ ಗುರುತಿಸಲು ಉತ್ತಮ ವೇದಿಕೆ: ಡಾ.ಹರಿಕೃಷ್ಣ ಪುನರೂರು ಹೇಳಿಕೆ

Kin_Achivement
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಬಹುಮಾನ ವಿತರಣಾ ಸಮಾರಂಭ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಸದಸ್ಯರಿಗೆ ಒಂದು ಉತ್ತೇಜಕ ಸಮಯ. ವರ್ಷವಿಡೀ ಕಠಿಣ ಪರಿಶ್ರಮ, ಸಮರ್ಪಣೆ, ಪ್ರಯತ್ನ ಮಾಡಿದವರ ಸಾಧನೆ ಗುರುತಿಸಲು ಇದು ಉತ್ತಮ ಸಮಯ ಎಂದು ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ತಿಳಿಸಿದರು.

ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ಶಿಮಂತೂರಿನ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭಗಳು ಅತ್ಯುತ್ತಮ ಸಾಧಕರ ಸಾಧನೆ ಗುರುತಿಸಲು, ಶ್ರೇಷ್ಠತೆಗಾಗಿ ಶ್ರಮಿಸಲು, ಇತರರನ್ನು ಪ್ರೋತ್ಸಾಹಿಸಲು ವೇದಿಕೆ ಒದಗಿಸುತ್ತದೆ ಎಂದರು.

ದೆಹಲಿವರಿ ಲಿ. ಕರ್ನಾಟಕ ವಿಭಾಗೀಯ ಮುಖ್ಯಸ್ಥ ವೇದವ್ಯಾಸ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ಹಳೇ ವಿದ್ಯಾರ್ಥಿ ಪುರುಷೋತ್ತಮ ಶೆಟ್ಟಿ ಮಜಲಗುತ್ತು, ಉದ್ಯಮಿ ಪ್ರದೀಪ್ ಶೆಟ್ಟಿ ಮಜಲಗುತ್ತು, ಶಿಮಂತೂರಿನ ಶ್ರೀ ಶಾರದಾ ಸೊಸೈಟಿ ಕಾರ್ಯದರ್ಶಿ ಪುರಂದರ ಶೆಟ್ಟಿಗಾರ್, ಕೋಶಾಧಿಕಾರಿ ಕೆ.ಭುವನಾಭಿರಾಮ ಉಡುಪ, ನಿರ್ದೇಶಕ ಸುರೇಶ್ ರಾವ್ ನಿರಾಳಿಕೆ, ಪ್ರಾಂಶುಪಾಲ ಜಿತೇಂದ್ರ ವಿ.ರಾವ್ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕ ಮಾತನಾಡಿದರು. ಸಹ ಶಿಕ್ಷಕಿ ಐಶ್ವರ್ಯ ವಂದಿಸಿದರು. ಉಪ ಪ್ರಾಂಶುಪಾಲೆ ದಿವ್ಯಾ ಟಿ.ಶೆಟ್ಟಿ ನಿರೂಪಿಸಿದರು. ಸಹ ಶಿಕ್ಷಕಿ ಅಮಿತಾ, ದೀಪಿಕಾ, ಶರ್ಮಿಳಾ ಬಹುಮಾನ ಪಟ್ಟಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net