6 ಮರಿಗಳಿಗೆ ಜನ್ಮ ನೀಡಿದ ಮೇಕೆ

goat
Published on

ಮಾಗಡಿ: ತಾಲೂಕಿನ ಮಲ್ಲಿಗುಂಟೆ ಗ್ರಾಮದ ರೈತೆ ರತ್ನಮ್ಮ, ತಿಮ್ಮೆಗೌಡ ಅವರಿಗೆ ಸೇರಿದ ಮೇಕೆಯೊಂದು ಶನಿವಾರ 6 ಮರಿಗಳಿಗೆ ಜನ್ಮನೀಡಿದೆ.

6 ಮೇಕೆ ಕುರಿಗಳು ಆರೋಗ್ಯವಾಗಿದ್ದು ರೈತೆ ರತ್ನಮ್ಮ, ತಿಮ್ಮೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

2 ಹಸುವಿನ ಜೊತೆ 4 ಮೇಕೆಯನ್ನು ಸಾಕಿದ ರತ್ನಮ್ಮ, ತಿಮ್ಮೇಗೌಡರು ಅದರಲ್ಲಿ ಒಂದು ಮೇಕೆ 6 ಮರಿಗಳಿಗೆ ಜನ್ಮನೀಡಿರುವ ಸುದ್ದಿ ತಿಳಿದ ಸುತ್ತಮುತ್ತಲ ಗ್ರಾಮದ ನೂರಾರು ರೈತರು ವೀಕ್ಷಿಸಲು ಮುಗಿಬಿದ್ದಿದ್ದಾರೆ.

6 ಮರಿಗಳನ್ನು ಖರೀದಿಗೆ ನೀಡುವಂತೆ ಸಾಕಷ್ಟು ರೈತರು ರೈತೆ ರತ್ನಮ್ಮ, ತಿಮ್ಮೇಗೌಡರಿಗೆ ಮನವಿ ಮಾಡುತ್ತಿದ್ದು ಈ ಮರಿಗಳನ್ನು ಮಾರಾಟ ಮಾಡದೆ ಸಾಕುವುದಾಗಿ ರೈತರಿಗೆ ಮನಹೊಲಿಸುತ್ತಿದ್ದಾರೆ.

ಗ್ರಾಮದ ರುದ್ರಾಣಿ ಎಂಬುವರಿಂದ 3 ತಿಂಗಳ ಹಿಂದೆ ಮೇಕೆಯನ್ನು ಖರೀದಿಸಿದರು ಇದು ಮೂರನೇ ಸೂಲಾಗಿದೆ ಎಂದು ತಿಮ್ಮೇಗೌಡ ವಿವರಿಸಿದರು.

ರೈತ ತಿಮ್ಮೇಗೌಡ ಮಾತನಾಡಿ, ಸುಮಾರು ವರ್ಷಗಳಿಂದ ಮೇಕೆಗಳನ್ನು ಸಾಕುತ್ತಿದ್ದೇನೆ ಈಗ 4 ಮೇಕೆಗಳಿದ್ದು ಈ ಪೈಕಿ ಒಂದು ಮೇಕೆ 6 ಮರಿಗಳಿಗೆ ಜನ್ಮ ನೀಡಿರುವುದು ಸಂತೋಷವಾಗಿದೆ ಅವುಗಳನ್ನು ನನ್ನ ಮಕ್ಕಳನ್ನು ಸಾಕಿದಂತೆ ಸಾಕುತ್ತೇನೆ ಯಾವುದೇ ಕಾರಣಕ್ಕೂ ಮರಿಗಳನ್ನು ಮಾರಾಟ ಮಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net