ವಿಜೃಂಭಣೆಯ ಕರಗ ಮಹೋತ್ಸವ

ವಿಜೃಂಭಣೆಯ ಕರಗ ಮಹೋತ್ಸವ
Published on

ಹೊಳೆನರಸೀಪುರ: ತಾಲೂಕಿನ ಬಾಗೀವಾಳು ಮತ್ತು ಕಡವಿನಹೊಸಹಳ್ಳಿ ಗ್ರಾಮದಲ್ಲಿ ಯುಗಾದಿ ಸಂವತ್ಸರದಲ್ಲಿ ನಡೆಸುವ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹೇಮಾವತಿ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದ ನಂತರ ಬಾಗೀವಾಳು ಗ್ರಾಮದ ಶ್ರೀರಾಮೇಶ್ವರ ದೇವಾಲಯ ಪ್ರದಕ್ಷಿಣೆಯೊಂದಿಗೆ ಕರಗ ಸೇವೆ ಆರಂಭವಾಯಿತು. ಕಡವಿನಹೊಸಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀಬಸವೇಶ್ವರಸ್ವಾಮಿ ಹಾಗೂ ಶ್ರೀ ಆಂಜನೇಯ ದೇಗುಲ ಸಮುಚ್ಚಯ ಪ್ರದೇಶದ ಆವರಣದಲ್ಲಿ ಕರಗ ನಡೆಸಲಾಯಿತು.

ಪ್ರತಿ ಯುಗಾದಿ ದಿನದ ಸಂಜೆ ವೇಳೆಗೆ ಹಬ್ಬದ ಸವಿಯೂಟ ಸವಿಧ ನಂತರ ಪಟ್ಟಣ ಸೇರಿದಂತೆ ಹಲವು ಗ್ರಾಮಗಳ ಭಕ್ತರು ಕರಗ ವೀಕ್ಷಿಸಿದರು. ಬಾಗೀವಾಳು ಗ್ರಾಮದ ವೇದಮೂರ್ತಿ ಚಂದ್ರಶೇಖರ್ ಕರಗ ಹೊತ್ತು, ಗೆಜ್ಜೆ ಕಟ್ಟಿ ಹೆಜ್ಜೆಹಾಕಿ ಗ್ರಾಮದ ದೇವಾಲಯಗಳನ್ನು ಪ್ರದಕ್ಷಿಣೆ ಹಾಕಿದರು. ಪಟ್ಟಣ ಸೇರಿದಂತೆ ಹಳೇಕೋಟೆ, ಮಲ್ಲೇಶಪುರ, ಕಡವಿನಕೋಟೆ ಗ್ರಾಮಸ್ಥರು ಕರಗ ಮೆರವಣಿಗೆ ಸಂದರ್ಬ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಭಕ್ತರ ಹರ್ಷೋದ್ಗಾರದೊಂದಿಗೆ ಕರಗಕ್ಕೆ ಕಾಣಿಕೆ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net