ಮದ್ವೆ ನಿಶ್ಚಿತಾರ್ಥವಾಗಿದ್ದ ಯುವತಿ ವರನ ಕುಟುಂಬಸ್ಥರು ಕೊಟ್ಟ ಆಭರಣ ಸಹಿತ ನಾಪತ್ತೆ!

Wedding
Published on

ಮಂಗಳೂರು: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಘಟನೆ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮಂಗಳೂರು ನಗರದ ಬಳ್ಳಾಲ್‌ಬಾಗ್‌ನ ಅಪಾರ್ಟ್‌ಮೆಂಟೊಂದ ನಿವಾಸಿರೇಶ್ಮಾ (21) ನಾಪತ್ತೆಯಾದವಳು. ಈಕೆಗೆ ಆ.21ರಂದು ಬೆಂಗಳೂರಿನ ಬೊಮ್ಮನಹಳ್ಳಿಯ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಅಂದು ವರನ ಮನೆಯವರು ಯುವತಿಗೆ 1 ಲಕ್ಷ ರೂ.ಮೌಲ್ಯದ ಚಿನ್ನದ ಸರ, 50 ಸಾವಿರ ರೂ.ಮೌಲ್ಯದ ಉಂಗುರ, 60 ಸಾವಿರ ರೂ. ಮೌಲ್ಯದ ಕಿವಿಯೋಲೆ ಹಾಗೂ ಕಾಲುಗೆಜ್ಜೆ ಕೊಟ್ಟಿದ್ದರು. ಇದೀಗ ಆಭರಣ ಸಹಿತ ಯುವತಿ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಯುವತಿಯ ತಾಯಿ ಯಶೋದಾ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೂಲಿ ಕೆಲಸ ಮಾಡಿ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿದ್ದ 90 ಸಾವಿರ ರೂ.ಅನ್ನೂ ಅಕ್ಬರ್ ಅಲಿ ಎಂಬಾತನ ಖಾತೆಗೆ ಮಗಳು ವರ್ಗಾಯಿಸಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net