ಶಾನುಭೋಗನಹಳ್ಳಿ ಡೇರಿ ಅಧ್ಯಕ್ಷ ಎ.ಜಿ.ಗಣೇಶ್

IMG-20251009-WA0059
ಶಾನುಭೋಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎ.ಜಿ.ಗಣೇಶ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಟಿ.ರಾಜು ಅವರನ್ನು ಅಭಿನಂದಿಸಲಾಯಿತು. ನಾಗೇಶ್, ಹಿತೇಂದ್ರ, ಬಸವರಾಜಪ್ಪ, ನಟೇಶ್, ರಮೇಶ್ ಇತರರು ಇದ್ದರು.
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಶಾನುಭೋಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಜಿ.ಗಣೇಶ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಟಿ.ರಾಜು ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಆಡಳಿತ ಮಂಡಳಿಯ ಒಪ್ಪಂದದಂತೆ ತೆರವಾಗಿದ್ದ ಸ್ಥಾನಗಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ.ಗಣೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಟಿ.ರಾಜು ಅವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಹಿತೇಂದ್ರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷ ಎ.ಜಿ.ಗಣೇಶ್ ಹಾಗು ಸಂಘದ ಮಾಜಿ ಅಧ್ಯಕ್ಷ ಬಸವರಾಜಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಕೆ.ನಾಗೇಶ್, ನಿರ್ದೇಶಕರಾದ ಬಸವರಾಜಪ್ಪ, ಎಸ್.ಪಿ.ರಮೇಶ್, ಎಸ್.ಎಸ್.ನಟೇಶ್, ಮೂರ್ತಿ, ಎಸ್.ಆರ್ .ಪ್ರಕಾಶ್, ಸವಿತಾ, ಮಂಗಳಾ, ಎಸ್.ಎಸ್.ದಿನೇಶ್, ಮುಖಂಡರಾದ ಎಸ್.ಕೆ. ಸತೀಶ್, ಎಸ್.ಕೆ.ಅಶೋಕ್ ಕುಮಾರ್, ಎಚ್.ಬಿ. ಸುಂದರ, ಎಸ್.ಆರ್.ಕೃಷ್ಣಪ್ಪ , ಎಸ್.ಡಿ.ಇಂದ್ರೇಶ್, ಉದಯ್ ಕುಮಾರ್, ಎಸ್.ಎಸ್.ಶಂಕರ್ ಇತರರು ಇದದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net