ವೆಡ್ಡಿಂಗ್ ಅನಿವರ್ಸರಿಗೆ ಹುಲಿ ದತ್ತು ಪಡೆದ ಅರಣ್ಯಾಧಿಕಾರಿ...!

Tiger
Published on

ಬೆಳಗಾವಿ: ಭೂತರಾಮನಹಟ್ಟಿ ಮೃಗಾಲಯಕ್ಕೆ ಈಗ ಬೆಳಗಾವಿ ಜನರ ಆಶಯದಂತೆ ಹುಲಿ-ಸಿಂಹಗಳು ಬಂದಿವೆ. ಪ್ರಾಣಿ ಪಕ್ಷಿಪ್ರಿಯರಿಗೆ ಅಮಿತ ಹರ್ಷವೂ ಉಂಟಾಗಿದೆ.

ಈ ಮಧ್ಯೆ ಪ್ರಪ್ರಥಮವಾಗಿ ಅರಣ್ಯಾಧಿಕಾರಿಯೇ ತಮ್ಮ ವೆಡ್ಡಿಂಗ್ ಎನಿವರ್ಸರಿ ಅಂಗವಾಗಿ ಹುಲಿ 'ಶೌರ್ಯ'ನನ್ನು ದತ್ತು ಪಡೆದು 'ಮೊದಲು ದತ್ತುಪಡೆದ' ದಾಖಲೆಯ ಹೆಸರು ಮಾಡಿದ್ದಾರೆ.

ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಮನೋಹರ ಕಡೋಲಕರ ದಂಪತಿ ಎರಡು ಹುಲಿಗಳ ಪೈಕಿ ಶೌರ್ಯನ ಒಂದು ವರ್ಷದ ಆಹಾರವೆಚ್ಚ ಹೊತ್ತು ದತ್ತು ಪಡೆದ ಮೊದಲಿಗರಾಗಿದ್ದಾರೆ. ಶ್ರೀನಾಥ ಮತ್ತು ಸುನಿತಾ ಕಡೋಲಕರ ದಂಪತಿ ತಮ್ಮ ಮಕ್ಕಳು ಶ್ರೇಯಸ್ ಮತ್ತು ಶೇಖರ್ ಅವರೊಂದಿಗೆ ಇಂದು ಭೂತರಾಮನಹಟ್ಟಿ ಮೃಗಾಲಯಕ್ಕೆ ತೆರಳಿ ದತ್ತು ಪಡೆದರು.

ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಿ.ಅಮರನಾಥ ಹುಲಿಯನ್ನು ದತ್ತು ನೀಡಿ ಪ್ರಮಾಣಪತ್ರ ವಿತರಿಸಿದರು.

ಎಸಿಎಫ್ ಎಂ. ಬಿ. ಕುಸನಾಳ, ಆರ್ ಎಫ್ ಓ ಮತ್ತು ಝೂ ಕ್ಯುರೇಟರ್ ರಾಕೇಶ ಅರ್ಜುನವಾಡ ಉಪಸ್ಥಿತರಿದ್ದರು.

ಆಹ್ವಾನ: ಸಾರ್ವಜನಿಕರು, ವನ್ಯಪ್ರೇಮಿಗಳು, ಉದ್ಯಮಿಗಳು, ಆರ್ಥಿಕ ಚೈತನ್ಯ ಹೊಂದಿದ ಯಾರೇ ಆದರೂ ಭೂತರಾಮನಹಟ್ಟಿ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರುವಂತೆ ಝೂ ನಿರ್ದೇಶಕ ಎಂ. ವಿ. ಅಮರನಾಥ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net