ಸುಳ್ಯ: ಬೆಳ್ಳಾರೆಯ ಹೋಟೆಲ್ ಒಂದರಲ್ಲಿ ಬೆಂಕಿ ಅವಡ ಸಂಭವಿಸಿ ಅಪಾರ ನಷ್ಟವಾದ ಟನೆ ಮಂಗಳವಾರ ನಡೆದಿದೆ.
ಬೆಳ್ಳಾರೆ ಮುಖ್ಯರಸ್ತೆ ಸಮೀಪವಿರುವ ತೃಪ್ತಿ ಹೋಟೆಲ್ನಲ್ಲಿ ಗ್ಯಾಸ್ಸ್ಟವ್ನಿಂದ ಬೆಂಕಿ ಹತ್ತಿಕೊಂಡು ಹತ್ತಿರವಿದ್ದ ಪ್ರಿಜ್ ಸಂಪೂರ್ಣ ಸುಟ್ಟುಹೋಗಿದೆ. ಪ್ರಿಜ್ ಮೇಲಿದ್ದ ಎರಡು ಮೊಬೈಲ್, ಇನ್ನಿತರ ವಸ್ತುಗಳು ಸುಟ್ಟುಹೋಗಿವೆ.
ಸನಿಹದ ಅಂಗಡಿಯವರು, ರಿಕ್ಷಾ ಚಾಲಕರು ಬೆಂಕಿ ನಂದಿಸಲು ಸಹಕರಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.