ಜಪಾನುಷ್ಠಾನದಿಂದ ಋಣಾತ್ಮಕ ಚಿಂತನೆ ದೂರ

Ull_Yaga
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಜಪ ಮತ್ತು ತಪಕ್ಕೆ ಪುರಾತನ ಕಾಲದಿಂದಲೇ ಪ್ರಾಮುಖ್ಯತೆ ನೀಡಲಾಗಿದೆ. ಜಪದಿಂದ ಋಣಾತ್ಮಕ ಚಿಂತನೆಗಳು ದೂರವಾಗಿ ಮನಸ್ಸು ಮತ್ತು ದೈಹಿಕ ಆರೋಗ್ಯ ಸದೃಢವಾಗುತ್ತದೆ ಎಂದು ಸೋಮೇಶ್ವರ ಸೋಮನಾಥ ಕ್ಷೇತ್ರದ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿ ಗೌರವಾಧ್ಯಕ್ಷ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಹೇಳಿದರು.

ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ನ.17ರಿಂದ ನ.21ರವರೆಗೆ ನಡೆಯಲಿರುವ ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ, ಮೂಡಪ್ಪ ಸೇವೆ, ರಂಗಪೂಜೆ, ದೇವರ ಬಲಿ ಉತ್ಸವ ಸೇವೆ, ಲಕ್ಷ ಬಿಲ್ವಾರ್ಚನೆ, ರುದ್ರಹೋಮ ಪ್ರಯುಕ್ತ ಭಾನುವಾರ ಕ್ಷೇತ್ರದ ಸಭಾಂಗಣದಲ್ಲಿ ಯಜ್ಞ ಸಮಿತಿಯ ಪೂರ್ಣ ಪ್ರವಾಣದ ಪೂರ್ವತಯಾರಿ ಸಭೆಯಲ್ಲಿ ವಾತನಾಡಿದರು.

ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಗೌರವ ಸಲಹೆಗಾರರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಮದಾಸ್ ಸೋಮೇಶ್ವರ, ಸುಧಾಕರ ಭಂಡಾರಿ, ಸಾರ್ವಜನಿಕ ಕೋಟಿ ಶಿವ ಪಂಚಾಕ್ಷರಿ ನಾಮಜಪ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ದೀಪಂ, ಕೋಶಾಧಿಕಾರಿ ಪರಮೇಶ್ವರ ಉಳ್ಳಾಲ್, ಪ್ರಧಾನ ಸಂಚಾಲಕರಾದ ಆನಂದ ಶೆಟ್ಟಿ ಭಟ್ನಗರ, ರವಿಶಂಕರ್ ಸೋಮೇಶ್ವರ, ಕಿಶೋರ್ ಎಕ್ಕೂರು, ಲಕ್ಷ ಬಿಲ್ವಾರ್ಚನೆ ಸಮಿತಿ ಅಧ್ಯಕ್ಷ ದೀಪಕ್ ಪಿಲಾರು, ವಾತೃ ಸಮಿತಿಯ ಪ್ರಧಾನ ಸಂಚಾಲಕಿ ದೇವಕಿ ಉಳ್ಳಾಲ್, ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ್ ಗಟ್ಟಿ, ಸುಂದರ್ ಉಳ್ಳಾಲ್ ಮೊದಲಾದವರಿದ್ದರು.

ಸಮಿತಿ ಪ್ರಧಾನ ಸಂಚಾಲಕ ರವಿಶಂಕರ್ ಸೋಮೇಶ್ವರ ಪ್ರಸ್ತಾವನೆಗೈದರು. ಆನಂದ ಶೆಟ್ಟಿ ಭಟ್ನಗರ ನಿರೂಪಿಸಿದರು. ರು ಉಚ್ಚಿಲ್ ವಂದಿಸಿದರು.

ಕಲಿಯುಗದಲ್ಲಿ ದೇವರ ನಾಮಸ್ಮರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಭೂಮಿ ಮತ್ತು ಪರಿಸರದಲ್ಲಿ ಅವಡ ಸಂಭವಿಸಿದಾಗ ನಾವು ಶಾಂತತೆಯ ಸ್ವರೂಪ ಶಿವನನ್ನು ಸ್ಮರಣೆ ವಾಡಿ ಸಂತುಷ್ಟಗೊಳಿಸುತ್ತೇವೆ. ಕ್ರೋಧಗೊಂಡ ಶಿವ ರುದ್ರನನ್ನು ತಣಿಸಲು ನಾವು ಯಜ್ಞ ವಾಡಬೇಕು. ಯಜ್ಞದ ಅನುಷ್ಠಾನಗಳು ಸಾವಾನ್ಯರಿಂದ ಸಾಧ್ಯವಿಲ್ಲ. ಹಾಗಾಗಿ ಜನಸಾವಾನ್ಯರೂ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಜಪ ಯಜ್ಞ ಆಯೋಜಿಸಲಾಗಿದೆ. ಈ ದೈವೀ ಕಾರ್ಯವು ಯಶಸ್ಸುಗೊಂಡರೆ ಸೋಮನಾಥ ಕ್ಷೇತ್ರದ ಸಾನ್ನಿಧ್ಯ ಬೆಳಗುತ್ತದೆ. - ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಯಜ್ಞ ಸಮಿತಿ ಗೌರವಾಧ್ಯಕ್ಷ https://www.vijayavani.net/notice-for-illegal-residual-demolition-of-buildings https://www.vijayavani.net/national-highway-protest-postponed

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net