VIDEO| ಎರಡು ಹಾವುಗಳ ನಡುವೆ ಫೈಟ್​ ನಡೆಯುತಿತ್ತು, ಅಲ್ಲಿಗೆ ಬಂದ ಯುವಕ ಮಾಡಿದ್ದೇನು?

suryakeerti
Published on

ಮೈಸೂರು: ನಗರದ ವಾಗ್ದಾವಿ ಬಡಾವಣೆಯ ಮನೆ ಮುಂದೆ ಎರಡು ಗಂಡು ಕೇರೆಹಾವುಗಳು ಕಿತ್ತಾಡುತ್ತಿದ್ದವು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ರಕ್ಷಕ ಸೂರ್ಯಕೀರ್ತಿ, ಆ ಹಾವುಗಳನ್ನು ಹಿಡಿದು ಪ್ರತ್ಯೇಕವಾಗಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಒಂದು ಹಾವು 7 ಅಡಿ ಉದ್ದ, ಮತ್ತೊಂದು ಹಾವು 9 ಅಡಿ ಉದ್ದ ಇದೆ.

ಇದೇ ವೇಳೆ ಮಾತನಾಡಿದ ಸೂರ್ಯ ಕೀರ್ತಿ, ಹೆಣ್ಣು ಹಾವಿಗಾಗಿ ಮತ್ತು ಜಾಗಕ್ಕಾಗಿ ಹಾವುಗಳ ನಡುವೆ ಜಗಳ ಆಗುತ್ತೆ. ಅದೇ ರೀತಿ ಇಲ್ಲೂ ಎರಡು ಗಂಡು ಹಾವುಗಳ ನಡುವೆ ರವೀಂದ್ರ ಎಂಬುವರ ಮನೆ ಮುಂದೆ ಫೈಟ್​ ನಡೆಯುತ್ತಿತ್ತು. ಸದ್ಯ ಇವರೆಡನ್ನೂ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net