ಹೆಬ್ರಿ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

hbr
Published on

ಹೆಬ್ರಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಐದು ದಿನಗಳ ಸುವರ್ಣ ಸಂಭ್ರಮದ ಗಣೇಶೋತ್ಸವ ಸಂಪನ್ನಗೊಂಡಿತು. ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.

ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಚ್. ಜನಾರ್ದನ್ ನೇತೃತ್ವದ ತಂಡ ಗಣೇಶೋತ್ಸವದ ಉಸ್ತುವಾರಿ ವಹಿಸಿತ್ತು. ಗಣೇಶೋತ್ಸವದ ಸುವರ್ಣ ಸಂಭ್ರಮದ ನೆನಪಿಗಾಗಿ ಗಣಪತಿ ದೇವರಿಗೆ ಚಿನ್ನಲೇಪಿತ ಕಿರೀಟ ಸಮರ್ಪಿಸಲಾಯಿತು.

ಹೆಬ್ರಿ ನಾಗರಾಜ ಜೋಯಿಸ್ ಸಹೋದರರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಹಾಪೂಜೆ, ವಿಸರ್ಜನೆ ಪೂಜೆ ನೆರವೇರಿದ ಬಳಿಕ ಹೆಬ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಿ ಪ್ರಭಾವಳಿ, ಸ್ವರ್ಣ ಕಿರೀಟ ಸಹಿತ ಗಣಪತಿ ದೇವರ ಭವ್ಯ ಪುರಮೆರವಣಿಗೆ, ಶೋಭಾಯಾಯತ್ರೆ ನೆರವೇರಿತು. ವಿವಿಧ ಟ್ಯಾಬ್ಲೊಗಳು, ಹುಲಿವೇಷ, ಚೆಂಡೆ ಸಹಿತ ವಿವಿಧ ಕಲಾಪ್ರಕಾರಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು, ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net