ಬೀದರ್​ನಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ: ಸಮಸ್ಯೆ ಹೇಳಿಕೊಂಡ ರೈತನಿಗೆ ಸಚಿವರು ಹೀಗಾ ಹೇಳೋದು? ಆಡಿಯೋ ವೈರಲ್​

bhaganavant khooba
Published on

ಬೀದರ್​: ಗೊಬ್ಬರ ಕೇಳಿದ ರೈತನಿಗೆ ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಸಡ್ಡೆಯ ಉತ್ತರ ಕೊಟ್ಟಿದ್ದು, ಸಚಿವರು ಮತ್ತು ರೈತನ ನಡುವಿನ ಸಂಭಾಷಣೆ ವೈರಲ್​ ಆಗಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಡಿಎಪಿ, ಯೂರಿಯಾ ಸಿಗದೆ ರೈತರು ಪರದಾಡುತ್ತಿದ್ದಾರೆ. ಬೀದರ್​ನ ಗಾಂಧಿ ಗಂಜ್​ನ ಬಹುತೇಕ ಅಂಗಡಿಗಳಲ್ಲಿ ಗೊಬ್ಬರ ಸ್ಟಾಕ್ ಇಲ್ಲ. ಜಿಲ್ಲೆಯ ಬಹುತೇಕ ಕಡೆ ಇದೆ ಪರಿಸ್ಥಿತಿ ಇದೆ. ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಪೂರೈಕೆಯಾಗಿಲ್ಲ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ಹಾಗಾಗಿ ಔರಾದ್ ತಾಲೂಕಿನ ರೈತನೊಬ್ಬ ಸಚಿವ ಭಗವಂತ ಖೂಬಾ ಅವರಿಗೆ ಕರೆ ಮಾಡಿ, ಇದು ಮುಂಗಾರು ಬಿತ್ತನೆ ಸಮಯ, ನಮ್ಮ ಊರಲ್ಲಿ ಗೊಬ್ಬರ ಸಿಗುತ್ತಿಲ್ಲ ಸರ್​ ಎಂದಿದ್ದಾರೆ. ಇದಕ್ಕೆ ಗರಂ ಆಗಿಯೇ ಉತ್ತರಿಸಿದ ಸಚಿವರು, ಕ್ಷೇತ್ರದ ಶಾಸಕರ ಬಗ್ಗೆಯೂ ಏಕವಚನದಲ್ಲೇ ಮಾತನಾಡಿದ್ದಾರೆ. ವೈರಲ್​ ಆದ ಆಡಿಯೋದಲ್ಲಿರುವ ಸಂಭಾಷಣೆ ಹೀಗಿದೆ.

ರೈತ: ಸರ್​, ನಮ್ಮೂರಲ್ಲಿ ಗೊಬ್ಬರ ಸಿಗುತ್ತಿಲ್ಲ

ಸಚಿವ: ಅದಕ್ಕೆ ನಾನೇನು ಮಾಡಲಿ? ಸಾವಿರಾರು ನೌಕರರು ಇದ್ದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ. ಗೊಬ್ಬರವನ್ನು ರಾಜ್ಯಕ್ಕೆ ಕಳಿಸೋದು ನನ್ನ ಕೆಲಸ, ಕಳಿಸಿದ್ದೇನೆ ಅಷ್ಟೆ. ಅಲ್ಲಿನ ಶಾಸಕ ಇದಾನಲ್ಲ, ಅವನಿಗೆ ಹೋಗಿ ಕೇಳು. ನನಗೆ ಬೇರೆ ಕೆಲಸ ಇಲ್ವಾ?

ರೈತ: ಮುಂಬರುವ ಚುನಾವಣೆಯಲ್ಲಿ ಹೇಗೆ ಆಯ್ಕೆ ಆಗ್ತೀರಿ ನೋಡಿ

ಸಚಿವ: ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ. ಏನ್ ಮಾಡಿಕೊಳ್ಳುತ್ತೀಯಾ ಮಾಡಿಕೋ ಹೋಗು. ಭಾತರ ಸರ್ಕಾರದ ಮಂತ್ರಿ ಇದೇನೆ, ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net