

ಅಂಕೋಲಾ: ಕೃಷಿ ಕೆಲಸಕ್ಕೆ ತೆರಳಿದ್ದ ರೈತ ಕಾಲು ಜಾರಿ ಹಳ್ಳಕ್ಕೆ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ತಾಲೂಕಿನ ಬೊಗ್ರಿಬೈಲ್ನಲ್ಲಿ ಭಾನುವಾರ ನಡೆದಿದೆ. ತಾಲೂಕಿನ ಬಾಳೇಗುಳಿ ನಿವಾಸಿ ಸುನೀಲ ಶಂಕರ ಗೌಡ (35) ಮೃತಪಟ್ಟ ವ್ಯಕ್ತಿ. ಇವರು ಆ. 6ರಂದು ಬೆಳಗ್ಗೆ ಬೊಗ್ರಿಬೈಲ್ನಲ್ಲಿ ಭತ್ತದ ನಾಟಿ ಕೆಲಸಕ್ಕೆ ಹೋದ ವೇಳೆ ಅವಘಡ ನಡೆದಿದೆ. ಈ ಕುರಿತು ಸಂದೀಪ ಶಂಕರ ಗೌಡ ಪೊಲೀಸ್ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಉದಯ ಕುಂಬಾರ, ಕಂದಾಯ ನಿರೀಕ್ಷಕ ಸಂತೋಷ ಯಳಗದ್ದೆ, ಪಿಎಸ್ಐ ಮಹಾಂತೇಶ ವಾಲ್ಮೀಕಿ ಭೇಟಿ ನೀಡಿ ಪರಿಶೀಲಿಸಿದರು.