ಕೃಷಿಯತ್ತ ಮುಖಮಾಡಿದ ರೈತ


motionLevel: -1; 
weatherinfo: null; 
temperature: 37;
motionLevel: -1; weatherinfo: null; temperature: 37;
Published on

ಆಲೂರು: ತಾಲೂಕಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರೈತರು ಕೃಷಿ ಚಟುವಟಿಕೆಯತ್ತ ಮುಖಮಾಡಿದ್ದಾರೆ.

ಬಿಸಿಲ ಬೇಗೆಯಿಂದ ಬೇಸತ್ತಿದ್ದ ರೈತ ಸದ್ಯ ಭರದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾನೆ. ಬೇಸಿಗೆಯಲ್ಲಿ ಬಿಸಿಲ ತಾಪ ಹೆಚ್ಚಾಗಿ ನದಿ, ಕೆರೆ ಹಾಗೂ ಜಲ ಮೂಲಗಳಲ್ಲಿ ನೀರು ಬತ್ತಿ, ರೈತ ತಾನು ಬೆಳೆದ ಫಸಲನ್ನು ರಕ್ಷಿಸಿಕೊಳ್ಳುವುದೇ ಕಷ್ಟ ಸಾಧ್ಯವಾಗಿತ್ತು. ಸದ್ಯ ಸುರಿಯುತ್ತಿರುವ ಮಳೆಯಿಂದ ರೈತ ನಿರಾಳನಾಗಿದ್ದಾನೆ.

ಆಲೂಗಡ್ಡೆ, ಜೋಳ, ಶುಂಠಿ ಇತರೆ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net