ಹೆಸರಿಗಷ್ಟೇ ಸ್ಥಾಪನೆಯಾದ ರೈತ ಉತ್ಪಾದಕ ಸಂಘ!

kkp
Published on

ಕನಕಪುರ ಕುರಿ ಮತ್ತು ಮೇಕೆ ಉತ್ಪಾದಕ ಸಂದಲ್ಲಿ ಸದಸ್ಯರ ಅಸಮಾಧಾನ

ಕನಕಪುರ: ಕುರಿ ಮತ್ತು ಮೇಕೆ ಉತ್ಪಾದಕರ ಕಂಪನಿಯ 2024&25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಗರದ ರೋಟರಿ ಭವನದಲ್ಲಿ ಮಂಗಳವಾರ ಕಂಪನಿ ಅಧ್ಯಕ್ಷ ಡಾ.ಟಿ.ಬಿ.ಪುಟ್ಟರಾಜು ಅಧ್ಯಕ್ಷತೆಯಲ್ಲಿ ನೆರವೇರಿತು.

ಸಭೆ ಆರಂಭವಾಗುತ್ತಿದ್ದಂತೆ ಕೆಲ ಸದಸ್ಯರು, ಸಭೆಯಲ್ಲಿ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿದೆ. ಇದರಿಂದ ರೈತರ ಸಂಗಳು ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸದಸ್ಯರಾದ ಹುಚ್ಚಪ್ಪ, ಕುಮಾರಸ್ವಾಮಿ, ಹೊಂಬಾಳೇಗೌಡ ಮಾದೇಗೌಡ ಸೇರಿದಂತೆ ಅನೇಕ ಸದಸ್ಯರು ಮಾತನಾಡಿ, ರೈತರನ್ನು ಸಂಟಿಸಿ ಸಶಕ್ತರಾಗಿಸುವ ಮೂಲಕ ಸಂವನ್ನು ಮುನ್ನಡೆಸಬೇಕಿದೆ. ಆದರೆ, ಇಲ್ಲಿ ಆಡಳಿತ ಮಂಡಳಿಯ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ನಾಲ್ಕು ವರ್ಷಗಳ ಹಿಂದೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೀಡಿದ ಮಾಹಿತಿಯಂತೆ ಸಂವು ಎಂಟು ಲಕ್ಷಕ್ಕೂ ಅಧಿಕ ಲಾಭದಲ್ಲಿತ್ತು. ನಂತರ 5 ಲಕ್ಷ ಲಾಭ ಕಂಡಿತು. ಈಗ ಲಾಭಾಂಶ ಕಡಿಮೆಯಾಗಲು ಕಾರಣ ಏನು ಎಂದು ಪ್ರಶ್ನಿಸಿದರು. ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕಿದೆ. ಸಂವು ರೈತರು ಉತ್ಪಾದಿಸುವ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡಬೇಕು. ಇದರಿಂದ ಬರುವ ಲಾಭವನ್ನು ಕಂಪನಿಗೆ ಬಳಸಿಕೊಳ್ಳುವುದು ಉತ್ತಮ ಎಂದರು.

ಸರ್ಕಾರ ಕುರಿ ಮತ್ತು ಮೇಕೆ ರೈತ ಉತ್ಪಾದಕರನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಸಂಗಳನ್ನು ಸ್ಥಾಪನೆ ಮಾಡಿದೆ. ಆದರೆ, ಕುರಿ ಸಾಕಣೆದಾರರ ಆರ್ಥಿಕ ಅಭಿವೃದಿಗಾಗಿ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹೆಸರಿಗಷ್ಟೇ ಸಂಗಳನ್ನು ಸ್ಥಾಪಿಸಲಾಗಿದೆ. ಅದಕ್ಕೆ ಉತ್ತೇಜನ ನೀಡದಿರುವುದು ವಿಪರ್ಯಾಸ ಎಂದರು.

ಕನಕಪುರ ಕಂಪನಿಯು ಕುಂಟುತ್ತಾ ಸಾಗುತ್ತಿದೆ. ಆದ್ದರಿಂದ ರೈತರಿಗೆ ಉಪಯುಕ್ತವಾಗುವ ಕಾರ್ಯಗಾರವನ್ನು ನಡೆಸಬೇಕು. ಬ್ಯಾಂಕ್​ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾಹಿತಿ ನೀಡಬೇಕು ಎಂದರು. ಅಧ್ಯಕ್ಷ ಡಾ. ಟಿ.ಬಿ.ಪುಟ್ಟರಾಜು ಮಾತನಾಡಿ, ನಮಗೆ ಬೇರೆ ಬೇರೆ ಜವಾಬ್ದಾರಿಗಳು ಹೆಚ್ಚಾಗಿದೆ. ಯಾರಾದರೂ ಆಸಕ್ತಿ ಇದ್ದವರು ಮುಂದೆ ಬಂದರೆ ಒಳಿತು ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಇಂತಹ ಮಾತುಗಳನ್ನು ಆಡದೆ ಆಡಳಿತ ಮಂಡಳಿಯವರು ಕುಳಿತು ಮಾತನಾಡಿ ರೈತರ ಅಭಿವೃದ್ಧಿಗೆ ಮುನ್ನಡಿ ಇಡಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷ ಬಿ.ಎಸ್​.ಗೌಡ, ವ್ಯವಸ್ಥಾಪಕ ನಿರ್ದೇಶಕ ಮೆಲ್ವನ್​ಲೂಯಿಸ್​, ನಿರ್ದೇಶಕರಾದ ನಾಗಲಿಂಗೇಗೌಡ, ಚೂಡಲಿಂಗೇಗೌಡ, ಡಿ.ನಟೇಶ್​, ಅರುಣ್​ದೇವ್​, ಕಬ್ಬಾಳೇಗೌಡ, ಮಂಜುಳಾ, ರೇಖಾಕುಮಾರ್​, ಮಹದೇವಪ್ಪ, ಚಿಕ್ಕವಿರಶೆಟ್ಟಿ, ಲಿಂಗರಾಜಗೌಡ, ಸಂಪತ್​ಕುಮಾರ್​, ನಾಗಯ್ಯ, ವಿಶ್ವಪ್ರಿಯ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net